Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವರ್ಷ ಕಳೆದರೂ ‌ಮುಗಿಯದ ಸ್ಮಾರ್ಟ್ ಸಿಟಿ ಕಾಮಗಾರಿ

localview news

ಬೆಳಗಾವಿ :ಸ್ಮಾರ್ಟ್ ಸಿಟಿ ರೇಸ್‌ನಲ್ಲಿ ಮೊದಲ 20 ಸಿಟಿಗಳಲ್ಲಿ ಅರ್ಹತೆ ಗಿಟ್ಟಿಸಿಕೊಂಡು ಆರು ವರ್ಷಗಳೇ ಕಳೆದಿವೆ. ಆದರೆ ವರ್ಷಗಳು ಕಳೆದರೂ ಯೋಜನೆ ಮಾತ್ರ ತೆವಳುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಸ್ಥಾಪಿಸಲಾಗಿದೆ. ಪಿಎಂಸಿ ಹಾಗೂ ಬಿಇಎಲ್ ಕಂಪನಿಯ ದಿವ್ಯ ನಿರ್ಲಕ್ಷ್ಯದಿಂದ ಕಾಮಗಾರಿಗಳ ಅನುಷ್ಠಾನದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ.

ಬೆಳಗಾವಿ ನಗರದಲ್ಲಿ ಎಲ್ಲೆಂದರಲ್ಲಿ ಅಗೆದ ರಸ್ತೆಗಳು, ಮಣ್ಣಿನಿಂದಲೇ ತುಂಬಿ ಹೋಗಿರುವ ಪಾದಚಾರಿ ಮಾರ್ಗಗಳು, ಬಾಯ್ತೆರೆದು ನಿಂತಿರುವ ಕಬ್ಬಿಣದ ಪಿಲ್ಲರ್‌ಗಳು, ಚರಂಡಿ ಕಾಮಗಾರಿಗಳು, ಅಲ್ಲಲ್ಲೇ ಅಗೆದ ರಸ್ತೆಗಳು, ರಸ್ತೆಯ ಪಕ್ಕದಲ್ಲಿ ಬಿದ್ದಿರುವ ಬೃಹದಾಕಾರದ ಪೈಪ್‌ಗಳು ಅಪಾಯಕ್ಕೆ ಆಹ್ವಾನ ನೀಡಿದಂತಿವೆ. ನಗರದ ಅಶೋಕ ನಗರ, ಗಾಂಧಿನಗರ, ಪೋರ್ಟ್ ರಸ್ತೆ, ಕೇಂದ್ರ ಬಸ್ ನಿಲ್ದಾಣದ ಹಿಂಬಂದಿ, ಮಾರ್ಕೇಟ್ ಪೊಲೀಸ್ ಠಾಣೆಯ ಮುಂಭಾಗ ಸೇರಿದಂತೆ ನಗರದ ಇನ್ನಿತರ ಪ್ರದೇಶಗಳಲ್ಲಿ ಸ್ಮಾರ್ಟ್ ಸಿಟಿಯ ಯೋಜನೆಯ ಕಾಮಗಾರಿಗಳು ಕುಂಟುತ್ತಾ ಸಾಗಿದ್ದು, ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ.

ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳಿಂದ ಬೆಳಗಾವಿ ನಗರದ ಜನ ನಿತ್ಯ ಸಂಚಾರ ಸಮಸ್ಯೆ ಅನುಭವಿಸಬೇಕಾಗಿದೆ. ಅಲ್ಲದೆ ಪ್ರಮುಖ ರಸ್ತೆಗಳಲ್ಲಿ ಮಣ್ಣು ಅಗೆದು ಪೈಪ್ ಲೈನ್ ಅಳವಡಿಕೆಯ ಕಾರ್ಯ ನಡೆಯುತ್ತಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ದೂಳನ್ನು ಹುಟ್ಟು ಹಾಕುತ್ತಿದೆ. ಮತ್ತೊಂದು ಕಡೆ ಪಾದಚಾರಿ ಮಾರ್ಗದ ಮೇಲೆಯೇ ಜಲ್ಲಿ ಕಲ್ಲು ಪುಡಿಯನ್ನು ಹಾಕಲಾಗಿದ್ದು, ಗಾಳಿ ಬಂದರೆ ಸಾಕು ಅದು ವಾಹನ ಸವಾರರ ಮುಖಕಕ್ಕೆ ರಾಚುತ್ತಿದೆ. ಇದರು ಜನರ ಆರೋಗ್ಯದ ಮೇಳೆ ದುಷ್ಪರಿಣಾಮ ಉಂಟು ಮಾಡಲಿದೆ. ಜತೆಗೆ ಅಶೋಕ ನಗರ, ಎಸ್ಪಿ ಕಚೇರಿಯ ಹಿಂಬಾಗದಲ್ಲಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಆಳದಿಂಧ ಮೇಲೆ ಎದ್ದಿರುವ ಕಬ್ಬಿಣದ ಪಿಲ್ಲರ್‌ಗಳಿಗೆ ಯಾವುದೇ ರೀತಿಯ ಸುರಕ್ಷತೆಯ ಅಳವಡಿಕೆ ಮಾಡದೆ ಹಾಗಯೇ ಬಿಡಲಾಗಿದ್ದು. ರಾತ್ರಿ ಸಮಯದಲ್ಲಿ ಸಾರ್ವಜನಿಕರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬೆಳಗಾವಿ ನಗರದಲ್ಲಿ ಮಹಾನಗರ ಪಾಲಿಕೆಯ ಕಾಮಗಾರಿಗಳು ನಡೆಯುತ್ತಿರುವುದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ವಾಹನ ಸವಾರರು ಹಾಗೂ ಜನರು ದೂಳಿನಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. ಜತೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿಯ ಕಾಮಗಾರಿಗಳು ಪ್ರಾರಂಭವಾಗಿದ್ದು, ಮತ್ತಷ್ಟು ದೂಳಿಗೆ ಕಾರಣವಾಗಿದೆ. ದೂಳು ಕಡಿಮೆ ಮಾಡಲು ನೀರನ್ನು ಹಾಕಬೇಕು. ಆದರೆ ನೀರು ಹಾಕುವ ಕಾರ್ಯಕ್ಕೂ ಸಂಬಂಧ ಪಟ್ಟ ಅಧಿಕಾರಿಗಳು ಮನಸ್ಸು ಮಾಡದಿರುವುದು ಜನರಿಗೆ ಬೇಸರ ತರಿಸಿದೆ.