Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆನ್ನುಹುರಿ ಜಾಥಗೆ ಚಾಲನೆ ನೀಡಿದ ಡಾ. ಕೋರೆ

localview news

ಬೆಳಗಾವಿ:ವಿಶ್ವ ಬೆನ್ನು ಹುರಿ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದ ನರಶಸ್ತçಚಿಕಿತ್ಸಾ ವಿಭಾಗವು ಏರ್ಪಡಿಸಲಾಗಿದ್ದ ಬೆನ್ನಹುರಿ ಜಾಗೃತಿ ಜಾಥಾವನ್ನು ನಗರದ ಚೆನ್ನಮ್ಮ ವೃತ್ತದಲ್ಲಿ ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಚಾಲನೆ ನೀಡಿದರು. ಜಾಥಾದಲ್ಲಿ ಕಾಹೆರನ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ, ಜೆಎನ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚರ‍್ಯರಾದ ಡಾ. ರಾಜೇಶ ಪವಾರ, ಡಾ. ಪ್ರಕಾಶ ಮಹಾಂತಶೆಟ್ಟಿ, ಡಾ. ಪ್ರಫುಲ್ ಮಾಸ್ತೆ, ಡಾ. ಅಭಿಶೇಖ ಪಾಟೀಲ, ಡಾ. ಪ್ರಕಾಶ ರಾಥೋಡ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಉಪನ್ಯಾಸ ಕರ‍್ಯಾಗಾರ:

ಬೆನ್ನುಹುರಿ ಮಾನವನ ಅತ್ಯಂತ ಪ್ರಮುಖವಾದ ಅಂಗ. ಇದಕ್ಕೆ ಸ್ವಲ್ಪ ತೊಂದರೆಯಾದರೂ ಕೂಡ ವ್ಯಕ್ತಿಯೂ ತೀವ್ರ ನೋವಿನಿಂದ ಬಳಲಬೇಕಾಗುತ್ತದೆ. ವಿಶ್ವದಲ್ಲಿ ಸುಮಾರು 54 ಕೋ.ಗೂ ಅಧಿಕ ಜನರು ಬೆನ್ನುಹುರಿ ತೊಂದರೆಯಿAದ ಬಳಲುತ್ತಿದ್ದಾರೆ. ಆದ್ದರಿಂದ ಇದಕ್ಕೆ ಗಾಯ ಅಥವಾ ಸಮಸ್ಯೆಯುಂಟಾಗದAತೆ ನೋಡಿಕೊಳ್ಳಲು ಪ್ರತಿಯೊಬ್ಬ ಸಾಮಾನ್ಯರಿಗೂ ಮೂಲ ತಿಳುವಳಿಕೆಯನ್ನು ತಿಳಿಸಿಕೊಡಬೇಕಾಗಿದೆ. ಅದಕ್ಕಾಗಿ ಗ್ರಾಮಿಣ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕರ‍್ಯ ನಡೆಯಬೇಕೆಂದು ಕಾಹೆರನ ಉಪಕುಲಪತಿ ಡಾ. ವಿವೇಕ ಸಾವೋಜಿ ಅವರಿಂದಿಲ್ಲಿ ಹೇಳಿದರು.

ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನರರೋಗ ವಿಭಾಗವು ದಿ. 23 ಅಕ್ಟೊಬರ 2021ರಂದು ಏರ್ಪಡಿಸಿದ್ದ ವಿಶ್ವ ಬೆನ್ನುಹುರಿ ದಿನಾಚರಣೆ ಹಾಗೂ ಉಪನ್ಯಾಸವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ದೇಹದ ಭಾರವೆಲ್ಲ ಇರುವದು ಬೆನ್ನಿನ ಮೇಲೆ. ಬೆನ್ನುಹುರಿ ಸಮಸ್ಯೆಯು ಬಹುಕ್ಲಿಷ್ಟಕರವಾಗಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಂಗವಿಕಲತೆ ಉಂಟಾಗಬಹುದು. ಶಸ್ತçಚಿಕಿತ್ಸೆ ಅತೀ ಸೂಕ್ಷö್ಮವಾಗಿರುತ್ತದೆ. ಆದ್ದರಿಂದ ರೋಗಿಗೂ ಕೂಡ ದೊಡ್ಡ ಗಾಯ ಮಾಡದೇ ಚಿಕ್ಕರಂದ್ರದ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಶಸ್ತçಚಿಕಿತ್ಸೆಯನ್ನು ನೆರವೇರಿಸಬೇಕು. ಸಂಶೋಧನೆ ಹಾಗೂ ಅತ್ಯಾಧುನಿಕತೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಜೆಎನ್‌ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ಕೀ ವೋಲ್ ಶಸ್ತçಚಿಕಿತ್ಸೆ ಅತ್ಯಂತ ಪ್ರಯೋಜನಕಾರಿಯಾಗಿದ್ದು, ಅದನ್ನೆ ಹೆಚ್ಚಾಗಿ ನೆರವೇರಿಸಬೇಕು. ಇದರಿಂದ ದೇಹಕ್ಕೆ ಆಗುವ ಗಾಯವು ಕಡಿಮೆ ಮತ್ತು ಶೀಘ್ರ ಗುಣಮುಖವಾಗುವ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳಿಂದ ರೋಗಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಅದೇ ರೀತಿಯ ಶಸ್ತçಚಿಕಿತ್ಸೆಗಳನ್ನು ನೆರವೇರಿಸಬೇಕು ಎಂದು ತಿಳಿಸಿದರು.

ಬೆಂಗಳೂರಿನ ನಿಮ್ಹಾನ್ಸ್ನ ನರಶಸ್ತçಚಿಕಿತ್ಸಾ ತಜ್ಞವೈದ್ಯರಾದ ಡಾ. ನೂಪೂರ ಪೃಥ್ವಿ ಹಾಗೂ ಅಸ್ಟರ ಸಿಎಂಐ ಆಸ್ಪತ್ರೆಯ ಡಾ. ಉಮೇಶ ಶ್ರಿಕಾಂತ ಅವರು ನರಶಸ್ತçಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಈ ಸಂದರ್ಭದಲ್ಲಿ ಡಾ. ವಿ ಎ ಕೋಠಿವಾಲೆ, ಡಾ. ವಿ ಡಿ ಪಾಟೀಲ, ಡಾ. ರವಿಶಂಕರ ನಾಯಕ, ಡಾ. ಸರೋಜಾ, ಡಾ. ಪ್ರಕಾಶ ಮಹಾಂತಶೆಟ್ಟಿ, ಡಾ. ಪ್ರಫುಲ್ ಮಾಸ್ತೆ, ಡಾ. ಅಭಿಶೇಖ ಪಾಟೀಲ, ಡಾ. ಪ್ರಕಾಶ ರಾಥೋಡ, ಡಾ. ರವಿರಾಜ ಘೋರ್ಪಡೆ, ಡಾ. ರಾಜೇಶ ಶೆಣೈ ಸೇರಿದಂತೆ ಮುಂತಾದವರು ಉಪಸ್ಥಿತರಿದದರು.