Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮನೋಭಾವ ಬೆಳೆಸಲು ಒಪ್ಪಂದ

localview news

 ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿಯ ಮನೋಭಾವ ಬೆಳೆಸುವ ಉದ್ದೇಶದಿಂದ ನಗರದ  ಜೆಜೆಎನ್‌ಡಿ ಭರತೇಶ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಹಾಗೂ ಬೆಂಗಳೂರಿನ ಯೂಥ್ ಫಾರ್ ಸೇವಾ ಸಂಘ ದೊಂದಿಗೆ(ಎನ್‌ಜಿಒ) ಬುಧವಾರ ಒಪ್ಪಂದ ಮಾಡಿಕೊಳ್ಳಲಾಯಿತು.

 ಯೂಥ್ ಫಾರ್ ಸೇವಾ ಸಂಸ್ಥೆಯ ಮಧುಸೂದನ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಮಾತ್ರ ಒತ್ತು ನೀಡುತ್ತಿರುವುದರಿಂದ ಅವರಲ್ಲಿ ಸಾಮಾಜಕಿ ಕಳಕಳಿ, ಸಮಾಜ ಸೇವೆಯಂತಹ ಮನೋಭಾವ ಕುಂದುತ್ತಿದೆ. ನಮ್ಮ ಸಂಸ್ಥೆಯ ಮೂಲಕ ವಿವಿಧ ಕಾರ್ಯಕ್ರಮ, ಕಾರ್ಯಾಗಾರ ಆಯೋಜಿಸಿ ಅವರನ್ನು ಸಮಾಜ ಸೇವೆಯಲ್ಲಿ ಭಾಗವಹಿಸುವಂತೆ ಮಾಡಲಾಗುವುದು ಎಂದರು.

 ಕಾಲೇಜಿನ ಪ್ರಾಂಶುಪಾಲರಾದ ಸುನೀತಾ ದೇಶಪಾಂಡೆ, ಕೋ-ಆರ್‌ಡೇನಿರೇಟರ್ ನೀತಾ ಗಂಗಾರೆಡ್ಡಿ, ಉಪನ್ಯಾಸಕರಾದ ಸಂದೀಪ ಬರೋಡೆ, ಬಾಳೇಶ ಮನ್ನಿಕೇರಿ ಹಾಗೂ ಯೂಥ್ ಫಾರ್ ಸಂಘದ ಬೆಳಗಾವಿ ಘಟಕದ ಸಂತೋಷ, ಹರ್ಷಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.