Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನ ತರಬೇತಿ ಅಗತ್ಯ- ರವಿ ಭಜಂತ್ರಿ

localview news

ಬೆಳಗಾವಿ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನದ ತರಬೇತಿ ಮತ್ತು ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಬೆಳಗಾವಿ ನಗರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಅವರು ಅಭಿಪ್ರಾಯಪಟ್ಟರು. ಬೆಳಗಾವಿಯ ಭರತೇಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ಸರಕಾರದ ವತಿಯಿಂದ ವಿದ್ಯಾರ್ಥಿಗಳಿಗಾಗಿಯೇ ರಚಿಸಲ್ಪಟ್ಟ ಅಟಲ ಟಿಂಕರಿ0ಗ್ ಲ್ಯಾಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರವು ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಹೊಸ ತಂತ್ರಜ್ಞಾನದ ಪರಿಚಯವನ್ನು ನೀಡಲು ಮುಂದಾಗಿದೆ. ವಿಶ್ವದ ವಿವಿಧ ದೇಶದಲ್ಲಿನ ಶಿಕ್ಷಣ ಪದ್ದತಿ ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ಈ ಹೊಸ ತಂತ್ರಜ್ಞಾನದ ಶಿಕ್ಷಣ ನೀಡಲು ಮುಂದಾಗಿದೆ. ಕೇಂದ್ರ ಸರಕಾರದ ಈ ಶಿಕ್ಷಣದ ವ್ಯವಸ್ಥೆಯಲ್ಲಿ ಎಲ್ಲ ಶಾಲೆಗಳು ಅನುಸರಿಸಬೇಕೆಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜೀವ ದೊಡ್ಡಣ್ಣವರ ಅವರು ಮಾತನಾಡಿ, ಅಟಲ ಟಿಂಕರಿAಗ್ ಲ್ಯಾಬವು ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾದ ಲ್ಯಾಬವಾಗಿದೆ. ಇಲ್ಲಿ ಎಲ್ಲ ತರಹದ ಶಿಕ್ಷಣ ಪಡೆಯಲು ಅನುಕೂಲತೆಗಳಿವೆ. ತಂತ್ರಜ್ಞಾನದ ಜೊತೆಗೆ ಶಿಕ್ಷಕರು ಸಹ ಉನ್ನತಿಕರಣಗೊಂಡು ಶಿಕ್ಷಣ ನೀಡುತ್ತಾರೆ. ಪ್ರತಿ ದಿನ ಹೊಸತೊಂದು ವಿಷಯ ಕಲಿಯಲು ಅನಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೊಸ ತಂತ್ರಜ್ಞಾನದ ತಿಳಿವಳಿಕೆ ನೀಡಲು ಮುಂದಾಗಬೇಕು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಪ್ರೇರಣೆ ನೀಡಬೇಕೆಂದು ಅವರು ಹೇಳಿದರು.

ಸಮಾರಂಭದಲ್ಲಿ ಮಾಣಿಕಬಾಗ ಆಟೊಮೊಬೈಲ ನಿರ್ದೇಶಕ ಸ್ವಪ್ನೀಲ ಶಹಾ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಪಾಲ ಖೇಮಲಾಪೂರೆ, ಜಂಟಿ ಕಾರ್ಯದರ್ಶಿ ಪ್ರಕಾಶ ಉಪಾಧ್ಯೆ, ಆಡಳಿತ ಮಂಡಳಿಯ ಸದಸ್ಯರಾದ ಹೀರಾಚಂದ ಕಲಮನಿ,ಮಾನವೇಂದ್ರ ಪದ್ಮಣ್ಣವರ, ಅಭಿನಂದನ ಕೋಚೆರಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಪ್ರಾಚಾರ್ಯ ಯೋಗಿತಾ ಪಾಟೀಲ ಅತಿಥಿಗಳನ್ನು ಸ್ವಾಗತಿಸಿದರು. ಮುಬಿನ ಜಮಾದಾರ ಕಾರ್ಯಕ್ರಮ ನಿರೂಪಿಸಿದರು. ಸೃಷ್ಟಿ ಕುಂದರಗಿ ವಂದಿಸಿದರು.