ಮೆಟಾ ಎಂದು ಹೆಸರು ಬದಲಾಯಿಸಿಕೊಂಡ ಫೇಸಬೂಕ್
ಸೋಶಿಯಲ್ ಮೀಡಿಯಾ ದಿಗ್ಗಜ ಫೇಸ್ಬುಕ್ ತನ್ನ ಹೆಸರನ್ನು ಮೆಟಾ ಎಂದು ರೆಬ್ರ್ಯಾಂಡಿಂಗ್ ಮಾಡಿಕೊಳ್ಳುವುದು ಎಂದು ಎಫ್ಬಿ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ. ಕಂಪನಿಯ ಭವಿಷ್ಯವು ವಿಭಿನ್ನ ಮಾಧ್ಯಮದ ಮೂಲಕ ಬಳಕೆದಾರರನ್ನು ಸಂಪರ್ಕಿಸುವ ವರ್ಚುವಲ್ ರಿಯಾಲಿಟಿ ಉತ್ಪನ್ನಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಜುಕರ್ಬರ್ಗ್ ಹೇಳಿದರು.
Facebook Inc ನನ್ನು ಈಗ ಮೆಟಾ ಎಂದು ಕರೆಯಲಾಗುತ್ತದೆ ಎಂದು ಮತ್ತು "ಮೆಟಾವರ್ಸ್" ನಿರ್ಮಿಸುವುದರ ಮೇಲೆ ಕಂಪನಿಯು ಕೇಂದ್ರೀಕರಿಸಿದೆ ಎಂದು ಹೇಳಿದೆ.
ಕಂಪನಿಯು ತನ್ನ ಸ್ಟಾಕ್ ಟಿಕ್ಕರ್ ಅನ್ನು ಎಫ್ಬಿಯಿಂದ ಎಮ್ವಿಆರ್ಎಸ್ಗೆ ಬದಲಾಯಿಸುವುದಾಗಿ ಹೊಸ ಹೆಸರನ್ನು ಪ್ರಕಟಿಸುವ ಮೂಲಕ ಹೇಳಿದೆ, ಇದು ಡಿಸೆಂಬರ್. 1 ರಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಎಫ್ಬಿ ಬ್ಲಾಗ್ ಓದಿ: