Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚಿಕನ್ ಮಾರಾಟ ಮಾಡ್ತಿದ್ದ ಮಹಿಳೆ ಸಾವು ಜನರಲ್ಲಿ ಆತಂಕ

localview news

ಬೆಳಗಾವಿ: ಮಹಾಮಾರಿ ಕೋರೊನಾ ವೈರಸಗೆ ಜಿಲ್ಲೆಯ ಹುಕ್ಕೇರಿ ಪಟ್ಟಣದ ಓರ್ವ 58 ವರ್ಷದ ಚಿಕನ್ ಮಾರಾಟ ಮಾಡುತ್ತಿದ ಮಹಿಳೆ  ಬಲಿಯಾಗಿದ್ದಾಳೆ. ಈ ಮೃತ ಮಹಿಳೆಯನ್ನು ಕ್ವಾರಂಟೈನಲ್ಲಿ ಇಡಲಾಗಿತ್ತು. ಮೃತ ಮಹಿಳೆಯು ಗುರುವಾರ ತೀವ್ರ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದರು. ಸಾವನಪ್ಪಿದ ನಂತರ ಕೊರೋನಾ ಸೋಂಕು ತಗುಲಿರುವದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹುಕ್ಕೇರಿ ಪಟ್ಟಣದಲ್ಲಿ ಸೋಂಕಿತ ಮಹಿಳೆ ವಾಸವಿದ್ದ ಪ್ರದೇಶವನ್ನು ತಾಲೂಕಾಡಳಿತ ಸಿಲ್ ಡೌನ ಮಾಡಿದೆ. ಚಿಕನ್ ಮಾರಾಟ ಮಾಡುತ್ತಿದ್ದ ಮಹಿಳೆಗೆ ಸಾವಿನ ನಂತರ ಮಹಿಳೆಯ ಸ್ವಾಬ್ ಪರೀಕ್ಷಿಸಿದಾಗ ಮಹಿಳೆಗೆ ಕೊರೊನಾ ಇರುವುದು ಖಚಿತವಾಗಿದೆ ಈಗ ತೀವ್ರ ಆತಂಕಕ್ಕೆ ಕಾರಣವಾಗಿದೆ. ಹುಕ್ಕೇರಿ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿದ್ದ ಕುಟುಂಬದವರು ಚಿಕನ್ ವ್ಯಾಪಾರವನ್ನ ಮಾಡುತ್ತಿದ್ದರು. ಮಹಿಳೆ ವಾಸವಿದ್ದ ಹುಕ್ಕೇರಿ ಪಟ್ಟಣದ ಏರಿಯಾವನ್ನ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ಸೀಲ್‍ಡೌನ್ ಮಾಡಿದ್ದಾರೆ.