Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಾತಾಡ್ ಮಾತಾಡ್ ಕನ್ನಡದಲ್ಲಿ ಪ್ರಥಮ ಸ್ಥಾನ ಪಡೆದ ಡಾ. ಸಂಜಯ

localview news

ಮೂಡಲಗಿ: ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಅನ್ಯ ಭಾಷೆ ಪದಗಳನ್ನು ಬಳಸದೇ ೪ ನಿಮಿಷ ಕನ್ನಡದಲ್ಲಿ ಮಾತನಾಡುವ ‘ಮಾತಾಡ್ ಮಾತಾಡ್ ಕನ್ನಡ’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಡಾ. ಸಂಜಯ ಎ. ಶಿಂಧಿಹಟ್ಟಿ ಪಡೆದುಕೊಂಡಿರುವರು. ದ್ವಿತೀಯ ಸ್ಥಾನವನ್ನು ಅಪೇಕ್ಷಾ ಮುರುಗೇಶ ಕತ್ತಿ ಮತ್ತು ತೃತೀಯ ಸ್ಥಾನವನ್ನು ಶಿವಾನಂದ ತೋರಣಗಟ್ಟಿ ಪಡೆದುಕೊಂಡಿರುವರು.

ಸ್ಪರ್ಧೆಯಲ್ಲಿ ಒಟ್ಟು ೭ ಜನರು ಭಾಗವಹಿಸಿದ್ದರು. ವಿಜೇತರಿಗೆ ನ. ೧ರಂದು ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಸಂಘಟರು ತಿಳಿಸಿದ್ದಾರೆ.