Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನಾಳೆ‌ ನಸುಕಿನ ಜಾವವೇ ಅಪ್ಪುವಿನ ಅಂತ್ಯಕ್ರಿಯೆ: ಸಿಎಂ ಬೊಮ್ಮಾಯಿ‌

localview news

ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನದಿಂದ ಇಡೀ ಚಿತ್ರರಂಗವೇ ಶೋಕಾಚರಣೆ ನಡೆಸಿದೆ. ಭಾನುವಾರ ನಸುಕೀನ‌ ಜಾವವೇ ಅಂತ್ಯಕ್ರಿಯೆ ನೆರವೆರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದರು.

ರಾಜ್ಯದ ಜನತೆಯ ಅಭಿಮಾನಿ ಬಂಧುಗಳಿಗೆ ಕೃತಜ್ಞತೆ. ಪುನೀತ್ ರಾಜ್‍ಕುಮಾರ್ ಅವರ ಪಾರ್ಥಿವ ಶರೀರ ನೋಡಲು ಶಾಂತ ರೀತಿಯಲ್ಲಿ ದರ್ಶನ ಮಾಡಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದೇನೆ. ಬೆಳಗ್ಗೆ ನಸುಕಿನ ಜಾವವೇ ಪುನಿತ್ ರಾಜ್ ಕುಮಾರ್ ಅಂತ್ಯಕ್ರಿಯೆ ನೆರವೆರಿಸಲು ತೀರ್ಮಾನಿಸಲಾಗಿದೆ.

ಅದಕ್ಕೆ ನಾವು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತ್ಯಕ್ರೀಯೆ ಮೂರನೇ ದಿನಕ್ಕೆ ಹಾಲು ತುಪ್ಪ ಕಾರ್ಯಕ್ರಮ ಇರುವುದರಿಂದ ನಸುಕೀನ ಜಾವವೇ ಪುನಿತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೆರಿಸಲಾಗುವುದು ಎಂದರು.

ಅಂತ್ಯಕ್ರಿಯೆ ಶಾಸ್ತ್ರೋಪ್ತವಾಗಿ ಆಗುವುದರಿಂದ ಅಭಿಮಾನಿಗಳಿಗೆ ಅವಕಾಶ ಇಲ್ಲ. ದಯಮಾಡಿ ಇದಕ್ಕೆ ಸಹಕರಿಸಬೇಕು ಎಂದರು.