ಎಂಇಎಸ್ ಗೆ ಬುದ್ದಿ ಕಲಿಸುತ್ತೇವೆ: ಸಚಿವ ಕಾರಜೋಳ
ಬೆಳಗಾವಿ:ಆನೆ ಹೋಗುವಾಗ ಶ್ವಾನ ಬೊಗಳಿದರೇ ಎನ್ ಆಗಲ್ಲ.ಸಿಟ್ಟನ್ನು ಸಿಟ್ಟಿನಿಂದ ಶಮನ ಮಾಡಲು ಆಗಲು.ಪ್ರೀತಿ, ವಿಶ್ವಾಸದಿಂದ ಎಲ್ಲರನ್ನೂ ಒಟ್ಟಾಗಿ ಸರ್ಕಾರ ತೆಗೆದುಕೊಂಡು ಹೋಗಲಿದೆ.ಮುಂದಿನ ದಿನಗಳಲ್ಲಿ ಎಂಇಎಸ್ ಗೆ ಬುದ್ದಿ ಕಲಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬೆಳಗಾವಿ ಜಿಲ್ಲೆಗೆ ಅನ್ಯಾಯ ವಿಚಾರ ಈ ವರ್ಷ ನನಗೆ ಸಮಾಧಾನ ಇಲ್ಲ. ಕನಿಷ್ಠ ಮೂರು ಪ್ರಶಸ್ತಿ ಆದರೂ ಜಿಲ್ಲೆಗೆ ಸಿಗಬೇಕಿತ್ತು. ಮುಂದಿನ ವರ್ಷ ಇದನ್ನು ಸರಿಪಡಿಸುತ್ತೇನೆ.
ಬೆಳಗಾವಿಯಲ್ಲಿ ಎಂಇಎಸ್ ಕಿರಿಕ್ ವಿಚಾರ.ಪ್ರತಿ 50 ಕಿ ಮೀಟರ್ ಗೆ ಭಾಷೆ ಬದಲಾವಣೆ ಆಗುತ್ತದೆ.ಅದನ್ನು ನೆಪವಾಗಿ ಇಟ್ಟುಕೊಂಡು ಹೋರಾಟ ಮಾಡಬಾರದು.
ನಾವು ಪಾಕಿಸ್ತಾನದ ಜತೆಗೆ ಕಚ್ಚಾಡಿದ ಹಾಗೇ ಕರ್ನಾಟಕ, ಮಹಾರಾಷ್ಟ್ರ ಈ ರೀತಿ ಹೋರಾಟ ಇರಬಾರದು.ಪ್ರಾದೇಶಿಕ ಭಾಷೆ ಇಂದು, ನಿನ್ನೆಯದು ಅಲ್ಲ 2 ವರ್ಷದಿಂದ ಇದೆ.ಬೆಳಗಾವಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ.ಮಾತೃ ಭಾಷೆ ಮನೆಯಲ್ಲಿ ಇರಲಿ.ಕೆಲ ಕಿಡಿಗೇಡಿಗಳು ಜೀವಂತವಾಗಿ ಇರಲು ಉಪದ್ಯಪಿ ಮಾಡುತ್ತಾರೆ ಎಂದರು.