Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಇಂದು ರಾತ್ರಿ 8 ಗಂಟೆಯಿಂದ ಎರಡನೇ‌ ವಾರದ ಲಾಕ್ ಡೌನ್

localview news

ಬೆಂಗಳೂರು: ಕೊರೋನಾ ತಡೆಗಟ್ಟಲು ರಾಜ್ಯಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಈ ಹಿನ್ನೆಲೆಯಲ್ಲಿ ಈ 2ನೇ ವಾರವೂ ಭಾನುವಾರ ಲಾಕ್ ಡೌನ್ ಮುಂದುವರಿಯಲಿದೆ.  ಆದ್ದರಿಂದ ಜನರು ಕೊಂಚ ಬಿಡುವು ಎಂದು ಭಾನುವಾರ ಹೊರಗೆ ಸುತ್ತಾಡುವವರಿಗೆ  ಪೊಲೀಸರು ಕಡಿವಾಣ ಹಾಕಿದ್ದಾರೆ. ಅನಗತ್ಯವಾಗಿ ತಿರುಗಾಡುವವರ ಮೇಲೆ ಕೇಸ್ ದಾಖಲಿಸಿ ವಾಹನಗಳನ್ನು ಸಿಜ್ ಮಾಡುವ ಕ್ರಮ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಜುಲೈ 11 ರಂದು ಶನಿವಾರ ರಾತ್ರಿ 8 ರಿಂದ ಜುಲೈ 13 ಸೋಮವಾರ ಬೆಳಗ್ಗೆ 5 ಗಂಟೆವರೆಗೂ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಿರಲ್ಲಿದೆ ಈ ವೇಳೆಯಲ್ಲಿ ಕಾನೂನು ನಿಯಮ ಉಲ್ಲಂಘಿಸಿ ಸುಖಾಸುಮ್ಮನೆ ತಿರುಗುವವರ ಮೇಲೆ ಪೋಲಿಸರು ನಿಗಾ ಇಡಲಿದ್ದಾರೆ.

ಭಾನುವಾರ ಲಾಕ್​ಡೌನ್​ ವೇಳೆ ಏನ ಇರಲ್ಲಾ ?

1.ಸರ್ಕಾರಿ ಬಸ್​​ಗಳು ರಸ್ತೆಗಿಳಿಯಲ್ಲ

2.ಆಟೋ, ಟ್ಯಾಕ್ಸಿ ಸೇವೆ ಇರಲ್ಲ

3. ಯಾವುದೇ ಅಂಗಡಿ ಮುಂಗಟ್ಟುಗಳು ಓಪನ್ ಆಗಲ್ಲ

4. ಶಾಪಿಂಗ್‌ ಮಾಲ್‌ಗಳು ಕಂಪ್ಲೀಟ್‌ ಕ್ಲೋಸ್‌

5. ಹೋಟೆಲ್​, ರೆಸ್ಟೋರೆಂಟ್​ ಮತ್ತು ಪಬ್​ ಮುಚ್ಚಿರಲಿವೆ

6. ಮಸೀದಿ, ಚರ್ಚ್​ ಮತ್ತು ದೇವಸ್ಥಾನಗಳನ್ನ ತೆರೆಯಲು ಅನುಮತಿ ಇಲ್ಲ

7. APMC ಮಾರುಕಟ್ಟೆಗಳು ಇಂದು ಸಂಜೆಯಿಂದಲೇ ಬಂದ್ ಆಗಲಿದೆ

8. ಬೀದಿಬದಿಯ ವ್ಯಾಪಾರಕ್ಕೂ ಅನುಮತಿ ಇಲ್ಲ

9. ಖಾಸಗಿ ವಾಹನ ಮತ್ತು ಬೈಕ್​​ಗಳಲ್ಲಿ ಯಾರೂ ಓಡಾಡುವಂತಿಲ್ಲ

10. ಅಂತರ್ ಜಿಲ್ಲೆ, ಅಂತರ್ ರಾಜ್ಯ ಪ್ರವಾಸಕ್ಕೆ ಅನುಮತಿಯಿಲ್ಲ

11. ವಾಕಿಂಗ್, ಪಾರ್ಕ್​​ನಲ್ಲಿ ವಿಹಾರದ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ

ಭಾನುವಾರ ಲಾಕ್​ಡೌನ್​ ವೇಳೆ ಏನು ಇರುತ್ತೆ?

1. ಹಾಲು, ಮೊಸರು, ತರಕಾರಿ, ಪೇಪರ್ ಎಂದಿನಂತೆ ಸಿಗಲಿದೆ

2. ದಿನಸಿ ವಸ್ತುಗಳು ಲಾಕ್​​ಡೌನ್​ ವೇಳೆಯೂ ಲಭ್ಯವಿರಲಿದೆ

3. ಔಷಧಿ ಅಂಗಡಿ, ಆಯಂಬುಲೆನ್ಸ್, ವೈದ್ಯಕೀಯ ಸೇವೆ ಇರಲಿವೆ

4. ಡಾಕ್ಟರ್​​, ನರ್ಸ್​ ಹಾಗೂ ತುರ್ತು ವಾಹನ ಓಡಾಟಕ್ಕೆ ಮಾತ್ರ ಅವಕಾಶ