Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸೈನಿಕರಿಗೆ ದೇಶವೇ ಋಣಿಯಾಗಿರಬೇಕು : ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ:ಗ್ರಾಮೀಣ ಕ್ಷೇತ್ರದ ಮುತ್ನಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಮಾಜಿ ಸೈನಿಕರ ಸಂಘ (ರಿ)ವನ್ನು ಸೋಮವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಉದ್ಘಾಟಿಸಿದರು.

ದೇಶ ಸುಭದ್ರ ಸ್ಥಿತಿಯಲ್ಲಿರುವುದಕ್ಕೆ ಸೈನಿಕರೇ ಕಾರಣರಾಗಿದ್ದು, ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಬಂಧು-ಬಳಗವನ್ನೆಲ್ಲ ಬಿಟ್ಟು ದೇಶದ ಗಡಿಭಾಗಗಳಲ್ಲಿ ಕರ್ತವ್ಯ ನಿರತರಾಗಿರುವ ಸೈನಿಕರಿಗೆ ಹಾಗೂ ಕರ್ತವ್ಯದಿಂದ ನಿವೃತ್ತಿಯಾಗಿರುವ ಎಲ್ಲ ಸೈನಿಕರಿಗೆ ನಾವೆಲ್ಲ ಋಣಿಯಾಗಿರಬೇಕು ಎಂದು ಹೆಬ್ಬಾಳಕರ್ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುತ್ನಾಳ ಕೇದಾರಪೀಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಮಾಜಿ ಸೈನಿಕರು, ಸಂಘದ ಅಧ್ಯಕ್ಷರಾದ ತಮ್ಮಣ್ಣ ಚ ದೇವಲತ್ತಿ, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು, ಸರ್ವಸದಸ್ಯರು, ಪಿಕೆಪಿಎಸ್ ನ ಎಲ್ಲ ಪದಾಧಿಕಾರಿಗಳು, ಶಿವಬಸಪ್ಪ ದೇವಲತ್ತಿ, ಪದ್ಮಪ್ಪ ಹುಲಮನಿ, ದೇಮನಗೌಡ ಹುಬ್ಬಳ್ಳಿ, ರುದ್ರಗೌಡ ಪಾಟೀಲ, ಅಡಿವೆಪ್ಪಗೌಡ ಪಾಟೀಲ, ಪಾರಿಸ್ ಪಾರಿಶ್ವಾಡ್, ಬಸವರಾಜ ಹುಬ್ಬಳ್ಳಿ, ಗ್ರಾಮದ ಜನರು ಉಪಸ್ಥಿತರಿದ್ದರು.