Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿ.ಸಿ.ನಾಲೆ ಸಂಪೂರ್ಣ ಆಧುನೀಕರಣಕ್ಕೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

localview news

ಮಂಡ್ಯ : ವಿ.ಸಿ.ನಾಲೆಯ ಸಂಪೂರ್ಣವಾಗಿ ಆಧುನೀಕರಣಕ್ಕೆ ಕ್ರಮಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕೆ.ಆರ್.ಎಸ್ ಅಣೆಕಟ್ಟು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಯ ಪೂಜೆ ಮಾಡಿ ಬಾಗಿನ ಸಮರ್ಪಿಸಿದ ನಂತರ ಮಾತನಾಡುತ್ತಿದ್ದರು.

೫೦೦ ಕೋಟಿ ರೂ.ಗಳ ವೆಚ್ಚದಲ್ಲಿ ನಾಲೆ ಆಧುನಿಕರಣ ಕಾರ್ಯವನ್ನು ಈಗಾಗಲೇ ಸರ್ಕಾರ ಪ್ರಾರಂಭಮಾಡಿದೆ. ೧೬೦೦ ಕಿ.ಮಿ.ವರೆಗೆ ಆಗಬೇಕೆಂಬ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುವುದೆಂದು ಭರವಸೆ ನೀಡಿದರು. ಕಾವೇರಿ ಜಲನಯನ ಪ್ರದೇಶದಲ್ಲಿ ಇಡೀ ಕನ್ನಡ ನಾಡಿನ ಹೆಮ್ಮೆಯ, ಪ್ರತಿಷ್ಠೆಯ ಅನ್ನವನ್ನು ಕೊಡುವ, ರೈತರಿಗೆ ಆರ್ಥಿಕ ಸ್ವಾವಲಂಬನೆ ನೀಡುವ ಮಹತ್ವದ ಯೋಜನೆ.

ನವೆಂಬರ್ ತಿಂಗಳಲ್ಲಿ ಅಣೆಕಟ್ಟು ಮಹಾರಾಜರ ಕಟ್ಟೆ ನಾಲೆಗಳ ಆಧುನೀಕರಣ ಆದರೆ ಮಂಡ್ಯ ಮೈಸೂರು ಭಾಗದ ನೀರಾವರಿ ಪ್ರದೇಶಕ್ಕೆ ಪ್ರಯೋಜನವಾಗಲಿದೆ. ಯೋಜನೆಯ ಹಿಂದೆ ಯೋಚನೆ ಇರಬೇಕು ಎಂದ ಮುಖ್ಯಮಂತ್ರಿಗಳು, ನವೆಂಬರ್ ತಿಂಗಳಲ್ಲಿ ಅಣೆಕಟ್ಟೆ ತುಂಬಿರುವುದು ಅಪರೂಪದ ಸಂದರ್ಭ ಎಂದು ಬಣ್ಣಿಸಿದರು.

ಕೃಷ್ಣಾ ಕಾವೇರಿ ನಾಡಿನ ಎರಡು ಕಣ್ಣುಗಳು. ಈ ಜಲಾನಯನ ಪ್ರದೇಶ ಅಭಿವೃದ್ಧಿಯಾದರೆ ಸಮೃದ್ಧ ಕರ್ನಾಟಕ ಅಭಿವೃದ್ಧಿಯಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ತಮಿಳುನಾಡು ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಿದೆ. ಕಾನೂನಾತ್ಮಕವಾಗಿ ಸಿ.ಡಬ್ಯು.ಸಿ ಹಾಗೂ ಕಾವೇರಿ ನದಿ ಪ್ರಾಧಿಕಾರದಲ್ಲಿ ನಮ್ಮ ಪಾತ್ರದ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದರು. ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧರಾಗಿದ್ದೇವೆ. ಕಾವೇರಿ ಟ್ರಿಬ್ಯೂನಲ್ ಆದೇಶದ ಅನ್ವಯ ತಮಿಳುನಾಡಿಗೆ ನೀರನ್ನು ಕೊಟ್ಟು ಹೆಚ್ಚಿನ ನೀರನ್ನು ಸಂಗ್ರಹ ಮಾಡಿ ಕುಡಿಯುವ ನೀರು, ಸಂಕಷ್ಟದ ವೇಳೆಯಲ್ಲಿ ಎರಡೂ ರಾಜ್ಯಗಳು ನೀರನ್ನು ಬಳಕೆ ಮಾಡಬಹುದಾದ ಈ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದರು.

ಕೆ.ಆರ್.ಎಸ್ ಆಧುನೀಕರಣ
ಕೆ.ಆರ್.ಎಸ್ ಗೆ ಒಂದು ಇತಿಹಾಸವಿದೆ. ಅಂದಿನ ನಾಲ್ವಡಿ ಕೃಷಣರಾಜ ಒಡೆಯರ್ ಮತ್ತು ಆಡಳಿತಗಾರರ ಸರ್.ಎಂ.ವಿಶ್ವೇಶ್ವರಯ್ಯ ಅವರು ಮನಸ್ಸು ಮಾಡದೇ ಹೋದಿದ್ದರೆ, ಮಂಡ್ಯ ಮೈಸೂರು ಕ್ಷೃಷಿಯಲ್ಲಿ ಮುಂದುವರೆಯಲು ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಕೆ.ಆರ್.ಎಸ್ ಅಣೆಕಟ್ಟನ್ನು ಬರುವ ೧೦೦ ವರ್ಷಕ್ಕೆ ಬಳಕೆಯಾಗಬೇಕಾದರೆ ಇದರ ರಕ್ಷಣೆ ಮತ್ತು ಸಂಪೂರ್ಣ ಆಧುನೀಕರಣ ಮಾಡಬೇಕಾಗುತ್ತದೆ ಎಂದ ಮುಖ್ಯಮಂತ್ರಿಗಳು ೨೦೦೮ ರಲ್ಲಿ ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ೭೫ ವರ್ಷಗಳಷ್ಟು ಹಳೆಯದಾದ ೩೦೦ ಕ್ಯೂಸೆಕ್ಸ್ ನೀರು ಗೇಟುಗಳ ರಂಧ್ರಗಳಿಂದ ಹರಿದುಹೋಗುತ್ತಿತ್ತು. ತಕ್ಷಣವೇ ಅವುಗಳ ಆಧುನೀಕರಣ ಕಾರ್ಯವನ್ನು ಕೈಗೊಂಡು ೧೬ ಗೇಟುಗಳನ್ನು ಬದಲಾಯಿಸಿ ಒಂದು ಹನಿಯನ್ನೂ ಸೋರದಂತೆ ವ್ಯವಸ್ಥೆ ಮಾಡಲಾಯಿತು ಎಂದು ಸ್ಮರಿಸಿದರು.

ನಿಗದಿತ ಅವಧಿಗೆ ಮುನ್ನವೇ ಕಾಮಗಾರಿ ಪೂರ್ಣಗೊಳಿಸಿ:
ಅಣೆಕಟ್ಟು ಸುರಕ್ಷತೆಯಿಂದಿರಬೇಕಾದರೆ ಗೇಟುಗಳು ಸುಭದ್ರವಾಗಿರಬೇಕು. ಪ್ರಸ್ತುತ ೧೩೬ ಗೇಟುಗಳನ್ನು ಬದಲಾಯಿಸುವ ಕಾಮಗಾರಿಯನ್ನು ತೆಗೆದುಕೊಳ್ಳಲಾಗಿದೆ. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಂಡು ನಿಗದಿತ ಅವಧಿಗೆ ಮುನ್ನವೇ ಪೂರ್ಣಗೊಳಿಸಿ ಎಂದು ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಇಂಜಿನಿಯರ್‌ಗಳಿಗೆ ಸಾರ್ವಜನಿಕವಾಗಿ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ವಿಜಯನಗರ ಅರಸುಗಳ ಕಾಲದಿಂದ ಹಿಡಿದು, ಮಹಾರಾಜರ ಕಾಲದ ಹೇಮಗಿರಿ, ಮಂದಗಿರಿ, ಮಿರ್ಜೆ, ಚಾಮರಾಜ ಹೀಗೆ ೧೪ ಅಣೆಕಟ್ಟುಗಳು ನೆಲಸಮವಾಗಿದ್ದವು ೯೪೦೦೦ ಎಕರೆಗೆ ನೀರಾವರಿಯನ್ನು ಈ ಅಣೆಕಟ್ಟುಗಳಿಂದ ಮಾಡಲಾಗಿತ್ತು. ಅವುಗಳ ಆಧುನೀಕರಣ ಕೈಗೆತ್ತಿಕೊಳ್ಳಲಾಗಿದೆ. ೧೧ ಪೂರ್ಣಗೊಂಡಿದ್ದು ಇನ್ನು ಮೂರು ಪೂರ್ಣಗೊಳ್ಳುವ ಹಂತದಲ್ಲಿವೆ ಎಂದರು.