Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕರಾಟೆಯಲ್ಲಿ ವಿಶ್ವದಾಖಲೆ ಬರೆದ್ ಬೆಳಗಾವಿ ಪೋರ

localview news

ಅಥಣಿ : ನಗರದ ಐ.ಎಮ್.ಎ ಹಾಲ್‌ನಲ್ಲಿ ಇವತ್ತು ಬೆಳಿಗ್ಗೆ ಜರುಗಿದ ಕರಾಟೆಯಲ್ಲಿ ಪಟ್ಟಣದ ನಿವಾಸಿ 06 ವರ್ಷ ವಯಸ್ಸಿನ ಬಾಲಕ ಸುಶೀಲಕುಮಾರ ವಿವೇಕ ಹೆಗಡೆ ಇವನು ಕೇವಲ 60 ಸೆಕೆಂಡುಗಳಲ್ಲಿ 305 ಕರಾಟೆ ಪಂಚ್ ಗಳನ್ನು ಮಾಡುವುದರ ಮೂಲಕ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾನೆ.

ಈ ಹಿಂದೆ ಇದೆ ರೀತಿ 254 ಪಂಚ್ ಮಾಡಿದ್ದ ಗೋವಾದ 35 ವರ್ಷದ ಯುವಕನ ದಾಖಲೆಯನ್ನು ಇವತ್ತು ಅಥಣಿಯಲ್ಲಿ ಕೇವಲ 06 ವರ್ಷದ ಅಥಣಿಯ ಬಾಲಕ ಸುಶೀಲಕುಮಾರ ಹೆಗಡೆ ಮುರಿದು ಎಲ್ಲರೂ ನಿಬ್ಬೆರಗಾಗುವಂತೆ ಅದ್ಬುತ ಸಾಧನೆ ಮಾಡಿ ಸಮಸ್ತ ಅಥಣಿ ಜನತೆ ಸೇರಿದಂತೆ ಇಡೀ ಕರ್ನಾಟಕ‌ ಹೆಮ್ಮೆ ಪಡುವಂತೆ ಮಾಡಿದ್ದಾನೆ.

ಈತನಿಗೆ ಅಥಣಿಯ ಕರಾಟೆ ತರಬೇತುದಾರ ಮೋಹನಸಿಂಗ್ ರಜಪೂತ ಮಾರ್ಗದರ್ಶನ ಮಾಡಿದ್ದಾರೆ.ಈ ವಿಶ್ವದಾಖಲೆಯನ್ನು ದೃಢಿಕರಿಸಲು ಶೊಟೋಕಾನ್ ಕರಾಟೆಯ ರಾಷ್ಟ್ರಾಧ್ಯಕ್ಷ ವಿನೋದ ಕುಮಾರ, ಎಕ್ಸಲೆಂಟ್ ವರ್ಲ್ಡ ರೆಕಾರ್ಡ ಮುಖ್ಯ ನಿರ್ಣಾಯಕ ಅವಿನಾಶ ವಿಶ್ವಕರ್ಮ ಅವರು ಆಗಮಿಸಿ ಈ ವಿಶ್ವದಾಖಲೆಯನ್ನು ದೃಢಿಕರಿಸಿದರು.ಈ ವೇಳೆ ಮುಖ್ಯ ಅತಿಥಿಗಳಾಗಿ ಶೇಖರ ಸವದಿ, ತಾಯಿ ವಿದ್ಯಾ ಹೆಗಡೆ, ಸಿದ್ದಲಿಂಗಪ್ಪ ಜಕ್ಕಪ್ಪನವರ, ಎ ಆರ್ ಸವದಿ, ಆನಂದ ಲಗಳಿ, ಸಂಗಮೇಶ ಹಚ್ಚಡದ ಅವರು ಉಪಸ್ಥಿತರಿದ್ದು ಹರ್ಷ ವ್ಯಕ್ತಪಡಿಸಿದರು.

ಕರಾಟೆ ಕಲೆಯಲ್ಲಿ ಅಥಣಿ ತಾಲೂಕಿನ 06 ವರ್ಷದ ಬಾಲಕ ಸುಶೀಲಕುಮಾರ ಸಾಧನೆ ಮಾಡಬೇಕಾದರೆ ಅವನಿಗೆ ಸತತ ಪ್ರಯತ್ನ‌ ಮತ್ತು ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಈ ಹಿಂದೆ ಮಾಡಿರುವ ದಾಖಲೆಯನ್ನು ಇತನು ಇವತ್ತು ಮುರಿದು ವಿಶ್ಬದಾಖಲೆ ಮಾಡಿರುವುದು ನಮ್ಮೆಲ್ಲರಿಗೆ ಹೆಮ್ಮೆಯಾಗಿದೆ ಇನ್ನು ಈತನಿಂದ ಗಿನ್ನಿಸ್ ಬುಕ್ ಆಫ್ ರೆಕಾರ್ಡ ಮಾಡಿಸುವ ಪ್ರಯತ್ನ ಮಾಡುತ್ತೆನೆಂದು ತರಬೇತುದಾರ ಮೋಹನಸಿಂಗ್ ರಜಪೂರ ಅವರು ಹರ್ಷ ವ್ಯಕ್ತಪಡಿಸಿದರು.