Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕುರಿಗಳ ಮೇಲೆ ಟಿಪ್ಪರ್ ಹಾಯ್ದು ಹಲವಾರು ಕುರಿಗಳ ಸಾವು: ಜಿಲ್ಲಾಧಿಕಾರಿಗಳ ಮೊರೆ ಹೋದ ಬಡಪಾಯಿ

localview news

ಬೆಳಗಾವಿ :ಕಡೋಲಿ ಗ್ರಾಮದ ರಹವಾಸಿಯಾದ ಮಲ್ಲಪ್ಪಾಬೀರಪ್ಪಾ ಶಹಾಪೂರಕರ ವೃತ್ತಿಯಿಂದ ಕುರಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಸ್ವಂತ ಕುರಿಗಳು 150 ಕುರಿಗಳನ್ನು ಹೊಂದಿದ್ದು . ಪ್ರತಿನಿತ್ಯದಂತೆ ಕುರಿಗಳನ್ನು ಮೇಯಿಸಲು ಹೋದಾಗ ದಿನಾಂಕ : 03-11-2021 ರಂದು ಸಾಯಂಕಾಲ 5 ರಿಂದ 5.30 ಸುಮಾರಿಗೆ ಬೆಳಗಾವಿ – ಅಗಸಗೆ ರಸ್ತೆಯ ಮೇಲೆ ಟಿಪ್ಪರ್ ಐಸರ್‌ ಗಾಡಿ ಉಸುಕು (ಮರಳು) ತುಂಬಿಕೊಂಡು ಹೋಗುತ್ತಿದ್ದ ವಾಹನ ಕುರಿಗಳ ಮೇಲೆ ಹಾಯ್ದ ಪರಿಣಾಮ ಸುಮಾರು 19 ಕುರಿಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. 16 ಕುರಿಗಳಿಗೆ ಮಾರಣಾಂತಿಕ ಗಾಯಗಳಾಗಿವೆ ಮತ್ತು 10 ಕುರಿಗಳು ಹೆದರಿ ಎಲ್ಲಿಯೋ ಓಡಿ ಹೋಗಿರುತ್ತವೆ. ಮತ್ತು ಕುರಿ ಕಾಯುತ್ತಿರುವ ಇಬ್ಬರಿಗೆ ಗಾಯಗಳಾಗಿದ್ದು ಅವರು ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ವಾಹನ ಚಲಾಯಿಸುತ್ತಿದ್ದ ಚಾಲಕ ಗಾಡಿಯನ್ನು ಅಂಬೇವಾಡಿಯಲ್ಲಿ ಪರಾರಿಯಾಗಿದ್ದು, ವಾಹನ ರಜಿಸರನಂ, ಕೆಎ-25 ಸಿ- 2356 ಇದ್ದು, ವಾಹನ ಅಂಬೇವಾಡಿ ಗ್ರಾಮದಲ್ಲಿ ಇರುತ್ತದೆ. ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಹಾಗೂ ಪೋಲಿಸ್ ಠಾಣೆಯ ಸಿಪಿಐ ಹಾಗೂ ಪೋಲಿಸರು ಬೆಟ್ಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ.

ಆದರೆ ಈ ಚಾಲಕನ ಬೇಜವಾಬ್ದಾರಿಯಿಂದ ನಮಗೆ ಆಗಿರುವ ಒಟ್ಟು 45 ಕುರಿಗಳ ಪ್ರತಿಯೊಂದಕ್ಕೆ ರೂ. 15,000/- ಪ್ರಕಾರ ಪರಿಹಾರವನ್ನು ಹಾಗೂ ಗಾಯಗೊಂಡ ಇಬ್ಬರಿಗೂ ಕೂಡ ಪರಿಹಾರವನ್ನು ಈ ವಾಹನ ಮಾಲಕರಿಂದ ಪರಿಹಾರ ಕೊಡಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ವಿನಂತಿಸಿಕೊಂಡಿದ್ದಾರೆ.