ನಾಳೆ ಕನ್ನಡ ಸಾಂಸ್ಕೃತಿಕ ಉತ್ಸವ: ಜೋಶಿ
ಬೆಳಗಾವಿ : ನಗರದ ಶಿವಬಸವನಗರದಲ್ಲಿ ಎಸ್.ಜೆ.ಬಾಳೇಕುಂದ್ರಿ ಸಭಾ ಭವನದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಹಾಗೂ ಸಪ್ತಸ್ವರ ಸಂಗೀತ ಕಲಾ ಇವರ ಆಶ್ರಯದಲ್ಲಿ ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ ಮತ್ತು ಕವಿಗೋಷ್ಠಿ, ವಿಚಾರಗೋಷ್ಠಿಯ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀರಂಗ ಜೋಶಿ ಹೇಳಿದರು.
ಶನಿವಾರ ಕನ್ನಡ ಸಾಹಿತ್ಯ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ ಆಗಮಿಸುವರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಸಂಸದೆ ಮಂಗಳಾ ಅಂಗಡಿ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ್ ಬೆನಕೆ, ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಸೇರಿದಂತೆ ಹಲಾವರು ಜನರು ಆಗಮಿಸಲಿದ್ದಾರೆ ಎಂದರು.
ಅಜರಾದ ಮುಲ್ಲಾ, ಮಲ್ಲಿಕಾರ್ಜುನ ನಾಯಕ, ವೀಣಾ ಕಿಡದಾಳ, ಸುರೇಶ ವಾಘಮೊಡೆ ಇದ್ದರು.