Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಗಲಿದ ಅಪ್ಪುವಿಗೆ ಚಿತ್ರಮಂದಿರದಲ್ಲಿ ಶ್ರದ್ಧಾಂಜಲಿ

localview news

ಬೆಳಗಾವಿ:ದಿವಂಗತ ಪುನೀತ್ ರಾಜಕುಮಾರ ಅಗಲಿ ಬರೋಬರಿ ಒಂಬತ್ತು ದಿನಗಳು ಕಳೆದರೂ ಅವರ ಅಗಲಿಕೆಯನ್ನು ಮರೆಯದ ಪುನೀತ್ ಅಭಿಮಾನಿಗಳು ಭಾನುವಾರ ಬೆಳಗಾವಿ ನಗರದ ಚಿತ್ರ ಮಂದಿರಗಳಲ್ಲಿ ಅಪ್ಪು ನಮನ ಕಾರ್ಯಕ್ರಮದಲ್ಲಿ ಬಾವು ಚಿತ್ರವಿಟ್ಟು, ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.

ದಿವಂಗತ ಪುನೀತ್ ರಾಜಕುಮಾರ್ ಮಹಿಳೆಯರು, ಮಕ್ಕಳು, ವಯೋಮಾನದ ಅಭಿಮಾನಿಗಳ ಬಳಗವನ್ನು ಅಪಾರ ಸಂಖ್ಯೆಯಲ್ಲಿ ಹೊಂದಿದ್ದರು. ಹೀಗಾಗಿ ಪುನೀತ್ ಇಲ್ಲದ ರಾಜ್ಯೋತ್ಸವ, ಅಪ್ಪು ಇಲ್ಲದ ದೀಪಾವಳಿ ಆಚರಿಸಲು ಅಪ್ಪು ಅಭಿಮಾನಿಗಳು ದುಃಖದ ಮಡುವಿನಲ್ಲಿದ್ದರು. ಭಾನುವಾರ ನಗರದ ಸ್ವರೂಪ ಚಿತ್ರ ಮಂದಿರದಲ್ಲಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚಾರಣೆ ನೆರವೆರಿಸಿದರು.