Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪುನೀತ್ ಇಂದಿಗೆ ಅಗಲಿ 11 ದಿನ: ಕುಟುಂಬಸ್ಥರಿಂದ ಪುನೀತ್ ಸಮಾಧಿಗೆವಿಶೇಷ ಪೂಜೆ

localview news

ಬೆಂಗಳೂರು:ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನ ಹೊಂದಿ ಇಂದಿಗೆ ಬರೋಬರಿ 11 ದಿನಗಳ ಕಳೆದವು. ಈ ಹಿನ್ನೆಲೆಯಲ್ಲಿ ಪುನೀತ್ ಕುಟುಂಸ್ಥರು ಹಾಗೂ ಅವರ ಸಂಬಂಧಿಕರು ಕಂಠೀರವ ಸ್ಟೂಡಿಯೋ ಬಳಿ ಇರುವ ಸಮಾದಿಗೆ ಭೇಟಿ ನೀಡಿ‌ ವಿಶೇಷ ಪೂಜೆ ಸಲ್ಲಿಸಿದರು.

ಓಲಾ ಬಸ್ ನಿಂದ ಮನೆಯಿಂದ ನೇರವಾಗಿ ಪುನೀತ್ ಸಮಾಧಿಗೆ ಬಂದ ಕುಟುಂಬಸ್ಥರು. ಪುನೀತ್ ಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿಕೊಂಡು ಬಂದಿದ್ದರು.

ಸಾರ್ವಜನಿಕರಿಗೆ, ಪುನೀತ್ ಅಭಿಮಾನಿಗಳಿಗೆ ಇಂದು ಮಧ್ಯಾಹ್ನ 12 ಗಂಟೆಯ ಬಳಿಕ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಿ ಕೊಡಲಾಗುತ್ತಿದೆ. ಪುನೀತ್ ಅಭಿಮಾನಿಗಳಿಗೆ ಅವರ ಕುಟುಂಬಸ್ಥರ ಕಡೆಯಿಂದ ಸುಮಾರು 3000 ಜನರಿಗೆ ಅಲ್ಪೋಪಹಾರದ ವ್ಯವಸ್ಥೆ ಮಾಡಿಸಲಾಗಿದೆ.