Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಂಗಮೇಶ ಹೂಗಾರಗೆ ಪಿಎಚ್ ಡಿ ಪದವಿ ಪ್ರಧಾನ

localview news

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಸಂಗಮೇಶ ಶಿವಪ್ಪ ಹೂಗಾರ ಇವರು ‘ಉತ್ತರ ಕರ್ನಾಟಕದ ಕಂಪನಿ ನಾಟಕಗಳಲ್ಲಿ ಸಮಾನತೆಯ ಆಶಯ’ ವಿಷಯದಲ್ಲಿ ಮಂಡಿಸಿರುವ ಪ್ರಬಂಧವನ್ನು ಮನ್ನಿಸಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿಯನ್ನು ಪ್ರಕಟಿಸಿದೆ.

ಡಾ. ಸಂಗಮನಾಥ ಲೋಕಾಪುರ ಅವರು ಹೂಗಾರ ಅವರ ಸಂಶೋಧನೆಗೆ ಮಾರ್ಗದರ್ಶನವನ್ನು ನೀಡಿದ್ದರು. ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯ ಡಾ.ಆರ್.ಎ. ಶಾಸ್ತ್ರೀಮಠ ಹಾಗೂ ಸಿಬ್ಬಂದಿಯವರು ಡಾ. ಹೂಗಾರ ಅವರನ್ನು ಅಭಿನಂದಿಸಿದ್ದಾರೆ.