ವಿಧಾನಪರಿಷತ್ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ
ಬೆಳಗಾವಿ :ಇಸಿಆಪಿಎನ್:93/2021, ದಿನಾಂಕ:09.11.2021, ರನ್ವಯ 04-ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರ ಬೆಳಗಾವಿ ಮತಕ್ಷೇತ್ರಕ್ಕೆ ಚುನಾವಣೆ ಜರುಗಿಸಲು ಈ ಕೆಳಕಂಡಂತೆ ವೇಳಾ ಪಟ್ಟಿಯನ್ನುಹೊರಡಿಸಲಾಗಿದೆ.
1.ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ16-11-2021 (ಮಂಗಳವಾರ)
2.ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ 23-11-2021 (ಮಂಗಳವಾರ)
3. ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ 23-11-2021(ಬುಧವಾರ)
4.ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯದಿನಾಂಕ ಮತ್ತು ದಿನ 26-11-2021(ಶುಕ್ರವಾರ)
5.ಮತದಾನ ದಿನ 10-12-2021(ಶುಕ್ರವಾರ)
6.ಮತದಾನದ ಸಮಯ ಮುಂಜಾನೆ 8-00 ಗಂಟೆಯಿಂದ ಸಾಯಂಕಾಲ 4-00 ಗಂಟೆಯ ವರೆಗೆ
7.ಮತಗಳ ಏಣಿಕೆ ದಿನಾಂಕ ಮತ್ತು ದಿನ 14-12-2021 (ಮಂಗಳವಾರ )8. ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನ 16-12-2021 (ಗುರುವಾರ)
ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಸದಸ್ಯರು, ಮಂತ್ರಿಗಳು, ರಾಜಕೀಯ ಪಕ್ಷ ಯಾವುದೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ಸಭೆಗಳನ್ನು ಏರ್ಪಡಿಸಬೇಕಾಗಿದ್ದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಮರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಮಾದರಿ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಜಾರಿಯಲ್ಲಿರುವದರಿಂದ ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಕಟ್ಟು ನಿಟ್ಟಾಗಿ ಮಾದರಿ ನೀತಿ ಸಂಹಿತೆಯನ್ನು ಪಾಲಿಸಲು ಈ ಮೂಲಕ ಕೋರಿದೆ.
ಮಾದಲ ನೀತಿ ಜಾರಿಯಲ್ಲಿರುವ ಸಮಯದಲ್ಲಿ ಯಾವುದೇ ನಗರ/ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಸದಸ್ಯರುಗಳ ಸಭೆಯನ್ನು ಜರುಗಿಸಬಾರದು ಹಾಗೂ ಯಾವುದೇ ಮತದಾರರಿಗೆ ಪ್ರಭಾವ ಬೀರುವ ಯೋಜನೆಗಳನ್ನು ಘೋಷಿಸಬಾರದು.
ಪ್ರಸ್ತುತ ಚುನಾವಣೆಗೆ ಜಿಲ್ಲಾಧಿಕಾರಿಗಳು ಬೆಳಗಾವಿ ಇವರು ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ.
ನಾಮಪತ್ರ ನಮೂನೆಗಳನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಪಡೆಯಬಹುದಾಗಿದೆ.
ನಾಮಪತ್ರಗಳನ್ನು ದಿನಾಂಕ:16.11.2021 ರಿಂದ 23:11.2021 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಮುಂಜಾನೆ 11-00 ಗಂಟೆಯಿಂದ 3-00 ಗಂಟೆ ಒಳಗಾಗಿ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಠೇವಣಿ ಮೊತ್ತ:
ರೂ. 10,000/- ಸಾಮಾನ್ಯ ಅಭ್ಯರ್ಥಿಗಳಿಗೆ
ರೂ. 5,000/- ಮೀಸಲಾತಿ ಅಭ್ಯರ್ಥಿಗಳಿಗೆ.
ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರಕಾರಿ ವಸತಿ ಗೃಹಗಳನ್ನು ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಜಿಲ್ಲಾಧಿಕಾರಿಗಳ ವಶಕ್ಕೆ ಪಡೆಯಲಾಗುವುದು.
ಪ್ರಸ್ತುತ ಚುನಾವಣೆಗೆ ಗ್ರಾಮ ಪಂಚಾಯತಿ ಸದಸ್ಯರುಗಳು, ಚಾಲ್ತಿಯಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲರುಗಳು, ಸಂಸದರು. ರಾಜ್ಯ ಸಭಾ ಸದಸ್ಯರು, ವಿಧಾನಪರಿಷತ್ತ ಸದಸ್ಯರುಹಾಗೂ ಶಾಸಕರು ಮತದಾರರಾಗುತ್ತಾರೆ.
ಪ್ರಸ್ತುತವಾಗಿ ಜಿಲ್ಲಾ ಪಂಚಾಯತ ಹಾಗೂ ತಾಲೂಕುಅಸ್ತಿತ್ವದಲ್ಲಿರುವುದಿಲ್ಲವಾದ್ದರಿಂದ ಅವರುಗಳು ಮತದಾರರಾಗುವುದಿಲ್ಲಾ.ಕರಡು ಮತದಾರರ ಪಟ್ಟಿಗಳನ್ನು ಇನ್ನು 2 ದಿನಗಳ ಒಳಗಾಗಿ ಪ್ರಕಟಿಸಲಾಗುವುದು.
ಪ್ರಸ್ತುತ ಚುನಾವಣೆ ಕುರಿತು ಮಾನ್ಯ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಕ್ರಮ ವಹಿಸಲಾಗುವುದು.
ಪ್ರಸ್ತುತ ಚುನಾವಣೆಗೆ ಮತ ಪತ್ರಗಳನ್ನು ಬಳಕೆ ಮಾಡಲಾಗುವುದು ಮತಪೆಟ್ಟಿಗೆಗಳನ್ನು ಬಳಕೆ ಮಾಡಲಾಗುವುದು
ಕೋವಿಡ್ -19:
ಭಾರತ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಮಾರ್ಗಸೂಚಿಯನ್ವಯ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಜರುಗಿಸಿಕೊಳ್ಳಲಾಗುವುದು. ಪ್ರಸ್ತುತ ಚುನಾವಣೆಯನ್ನು ಕೋವಿಡ್ 19 ಸೋಂಕು ತಡೆಗಟ್ಟುವಿಕೆಯೊಂದಿಗೆ - ಚುನಾವಣೆಯನ್ನು ಜರುಗಿಸಲಾಗುತ್ತಿದ್ದು, ಮತದಾರರು ಹಾಗೂ ಅಭ್ಯರ್ಥಿಗಳು ಸಾಮಾಜಿಕ ಭದ್ರತೆ ಹಾಗೂ ಮಾಸ್ಕ್ ಧಾರಣೆ ಕಡ್ಡಾಯವಾಗಿ ಧರಿಸಿ ದೈವಾರ್ಷಿಕ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಂಪೂರ್ಣ ಸಹಕಾರ ನೀಡಲು ಈ ಮೂಲಕ ಕೋರಿದೆ.