Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಚ್ಚೆ ಹಲಗಾ ಬೈ ಪಾಸ್ ಕಾಮಗಾರಿ ವಿರುದ್ದ ರೈತರ ಆಕ್ರೋಶ

localview news

ಬೆಳಗಾವಿ :ಮಚ್ಚೆ ಹಲಗಾರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಕಾಮಗಾರಿಗೆ ರೈತರು ವಿರೋಧ ವ್ಯಕ್ತ ಪಡಿಸಿದರು ಮತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.

ಈ ಕಾಮಗಾರಿಯ್ ವಿರುದ್ದ ವಿರೊಧ ವ್ಯಕ್ತ ಪಡಿಸಿದ ರೈತನ ಮಗ ಅವಿನಾಷ್ ಸತತ ನಾಲ್ಕು ಗಂಟೆಗಳ ಕಾಲ ಮರ ಏರಿ ಕುಳಿತ ಮತ್ತು ಇತನನ್ನು ಮನವೊಲಿಸಿ ಮರದಿಂದ ಕೆಳಗಿಳಿಸಲು ಪೊಲೀಸರು ಹರಸಾಹಸ್ ಪಡಬೇಕಾಯಿತು.

ಪೊಲೀಸರ ಮುಂದೆ ಆತ್ಮ ಹತ್ಯೆಗೆ ಪ್ರಯತ್ನಿಸಿದ ರೈತನನ್ನು ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು.

ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಮತ್ತು ಮಹಿಳೆಯರನ್ನು ಎರಡು ಪ್ರತ್ಯೇಕ ವಾಹನದಲ್ಲಿ ಪೋಲಿಸರು ವಶಕ್ಕೆ ಪಡೆದು ಕೊಂಡರು.

ಫಲವತ್ತಾದ ಜಮೀನನ್ನು ರಸ್ತೆ ಕಾಮಗಾರಿಗೆ ಬಿಟ್ಟು ಕೊಡುವುದಿಲ್ಲ ಎಂದು ರೈತರ ಪಟ್ಟು ಹಿಡಿದಿದ್ದಾರೆ.