Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಭಾರತಕ್ಕೆ ರಷ್ಯಾದಿಂದ S-400ಕ್ಷಿಪಣಿ ವಿತರಣೆ ಪ್ರಾರಂಭ: ವೈರಿ ರಾಷ್ಟ್ರಗಳಲ್ಲಿ ಹೆಚ್ಚಿದ ನಡುಕ

localview news

ದೆಹಲಿ :ನರೇಂದ್ರ ಮೋದಿ ಸರ್ಕಾರ 5.2 ಬಿಲಿಯನ್ ಡಾಲರಗೆ ಮಾಡಿದ ಒಪ್ಪಂದದ ಅಡಿಯಲ್ಲಿ ರಷ್ಯಾದ S-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಗಳ ವಿತರಣೆಯು ಭಾರತಕ್ಕೆ ಪ್ರಾರಂಭವಾಗಿದೆ. ಈ ವ್ಯವಸ್ಥೆಯ ಕೆಲವು ಭಾಗಗಳು ಈಗಾಗಲೇ ದೇಶವನ್ನು ತಲುಪಿವೆ ಎಂದು FSMTC ನಿರ್ದೇಶಕರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಉತ್ಪಾದನೆಯ ಎಲ್ಲಾ ತಂತ್ರಜ್ಞಾನ ಸಂಬಂಧಿತ ಹಂತಗಳು ಪೂರ್ಣಗೊಂಡಿವೆ. ಅಲ್ಲದೆ ಭಾರತಕ್ಕೆ ಉಪಕರಣಗಳ ವರ್ಗಾವಣೆ ಹಾಗೂ ಸ್ವೀಕಾರದ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಂಡಿದೆ.

ಪ್ರಧಾನಿ   ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ 2018ರ ವಾರ್ಷಿಕ ಶೃಂಗಸಭೆಯ ಕೊನೆಯಲ್ಲಿ ಎರಡು ದೇಶಗಳ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಎನಿದು S-400 ಕ್ಷಿಪಣಿ
S-400 ಟ್ರಯಂಫ್ ಹಿಂದೆ S-300 PMU-3 ಎಂದು ಕರೆಯಲಾಗುತ್ತಿತ್ತು, ಇದು ಒಂದು ಮೊಬೈಲ್, ಮೇಲ್ಮೈಯಿಂದ ಗಾಳಿಗೆ ಹಾರುವ ಕ್ಷಿಪಣಿಯಾಗಿದೆ (Surface to Air) ಇದನ್ನು  ರಷ್ಯಾದ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋ ಎಂಜಿನಿಯರಿಂಗ್‌ ಅಭಿವೃದ್ಧಿಪಡಿಸಿತ್ತು.

ಮೊದಲ S-400 ಅನ್ನು ಆಗಸ್ಟ್ 2007 ರಲ್ಲಿ ಯುದ್ಧದಲ್ಲಿ ನಿಯೋಜಿಸಲಾಯಿತು. ಮಾಸ್ಕೋ ಪ್ರಾಂತ್ಯ, ಬಾಲ್ಟಿಕ್ ಎಕ್ಸ್‌ಕ್ಲೇವ್ ಆಫ್ ಕಲಿನಿನ್‌ಗ್ರಾಡ್ ಮತ್ತು ಈಸ್ಟರ್ನ್ ಮಿಲಿಟರಿ ಡಿಸ್ಟ್ರಿಕ್ಟ್‌ನಲ್ಲಿ ರಾಷ್ಟ್ರೀಯ ವಾಯುಪ್ರದೇಶವನ್ನು ರಕ್ಷಿಸಲು ರಷ್ಯಾ ನಾಲ್ಕು S-400 ರೆಜಿಮೆಂಟ್‌ಗಳನ್ನು ಸ್ಥಾಪಿಸಿತು.

S-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯು ಬಹುಕ್ರಿಯಾತ್ಮಕ ರಾಡಾರ್, ಸ್ವಾಯತ್ತ ಪತ್ತೆ ಮತ್ತು ಗುರಿ ವ್ಯವಸ್ಥೆಗಳು, ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆಗಳು, ಲಾಂಚರ್‌ಗಳು ಮತ್ತು ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಸಂಯೋಜಿಸುತ್ತದೆ. ಇದು ಲೇಯರ್ಡ್ ಡಿಫೆನ್ಸ್ ರಚಿಸಲು ಮೂರು ರೀತಿಯ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ಹೊಂದಿದೆ.