Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಖುರ್ಷಿದ್ ಪುಸ್ತಕ ನಿಷೇಧಿಸುವಂತೆ ಒತ್ತಾಯ

localview news

ಬೆಳಗಾವಿ:ಹಿಂದುತ್ವವನ್ನು ಭಯೋತ್ಪಾದನೆಗೆ ಹೋಲಿಸಿದ ಸಲ್ಮಾನ್ ಖುರ್ಷಿದ್ ಪುಸ್ತಕದ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿ ಮಂಗಳವಾರ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಭಾರತ ಮತ್ತು ಭಾರತೀಯತೆ, ಮಾತೆ ಮತ್ತು ಮಾತೃತ್ವದ ಇವುಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಹಾಗೆಯೇ ಹಿಂದೂ ಮತ್ತು ಹಿಂದುತ್ವದ ನಡುವೆ ಯಾವುದೇ ಭೇದ ಮಾಡಲು ಬರುವುದೇ ಇಲ್ಲ. ಆದ್ದರಿಂದ ರಾಹುಲ ಗಾಂಧಿ ಮತ್ತು ಸಲ್ಮಾನ ಖುರ್ಷಿದ್ ಅವರು ‘ಹಿಂದುಯಿಸಮ್’ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವಿದೆ ಎಂದು ಎಷ್ಟೇ ಸ್ಪಷ್ಟೀಕರಣ ನೀಡಿದರೂ ಹಿಂದೂಗಳು ಅದಕ್ಕೆ ಮರುಳಾಗುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ಹಿಂದೂ ಧರ್ಮದ ಮೇಲೆ ನಿಜವಾದ ಪ್ರೀತಿ ಇದ್ದರೆ, ಅದು ‘ಭಗವಾನ ಶ್ರೀರಾಮ ಮತ್ತು ಶ್ರೀಕೃಷ್ಣ ಕಾಲ್ಪನಿಕವಾಗಿವೆ’, ‘ಕೇಸರಿ ಭಯೋತ್ಪಾದನೆಯಿಂದ ದೇಶಕ್ಕೆ ಅಪಾಯವಿದೆ’, ಎಂದು ಹೇಳಿ ಹಿಂದೂ ಧರ್ಮವನ್ನು ಅವಮಾನಿಸುತ್ತಿರಲಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕಾಶ್ಮೀರ ಮತ್ತು ಪಾಕಿಸ್ತಾನ-ಬಾಂಗ್ಲಾದೇಶಗಳಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳ ವಿರುದ್ಧವೂ ಅದು ಧ್ವನಿ ಎತ್ತುತ್ತಿತ್ತು. ಆದರೆ, ಇದ್ಯಾವುದನ್ನೂ ಮಾಡದೇ ಇದೀಗ ಚುನಾವಣೆಯ ಕಾರಣದಿಂದ ಹಿಂದೂ ಮತಗಳ ಮೇಲೆ ಕಣ್ಣಿಟ್ಟು ದೇವಸ್ಥಾನ-ಪ್ರವಾಸವನ್ನು ಆರಂಭಿಸಿದೆ. ಅದೇ ಕಾಂಗ್ರೆಸ್ಸಿನ ನಾಯಕರು ಹಿಂದೂಗಳನ್ನು ‘ಬೊಕೊ-ಹರಾಮ್ ಮತ್ತು ‘ಐಸಿಸ್’ನ ಭಯೋತ್ಪಾದಕರೊಂದಿಗೆ ಹೋಲಿಸಿ ಅವಮಾನಿಸುತ್ತಿದ್ದಾರೆ. ಇದಕ್ಕೆ ತೇಪೆಹಚ್ಚಲು ಹಿಂದುತ್ವ ಮತ್ತು ‘ಹಿಂದೂಯಿಸಮ್’ ನಡುವೆ ವ್ಯತ್ಯಾಸವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದಕ್ಕೆ ಹಿಂದೂ ಸಮಾಜವು ಇನ್ನು ಮರುಳಾಗುವುದಿಲ್ಲ, ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿಡಬೇಕು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಹಿಂದೂ ಧರ್ಮದ ಮೇಲೆ ಪ್ರೀತಿ ಇದ್ದರೆ, ಸಲ್ಮಾನ್ ಖುರ್ಷಿದ್ ಅವರಿಗೆ ತಮ್ಮ ಪುಸ್ತಕವನ್ನು ಹಿಂಪಡೆಯಬೇಕು ಮತ್ತು ಹಿಂದೂ ಸಮಾಜದ ಬಳಿ ಕ್ಷಮೆ ಕೇಳಲು ಹೇಳಬೇಕು. ಭಾರತದಲ್ಲಿ ಡಾ-ವಿನ್ಸಿ ಕೋಡ್, ಸೈಟಾನಿಕ್ ವರ್ಸಸ್ ಈ ಇತರ ಧರ್ಮದವರ ಪುಸ್ತಕಗಳನ್ನು ನಿಷೇಧಿಸಬಹುದಾದರೆ ಸಲ್ಮಾನ್ ಖುರ್ಷಿದ್ ಅವರ ಪುಸ್ತಕ ‘ಸನ್ರೈಸ್ ಓವರ್ ಅಯೋಧ್ಯಾ : ನೇಷನ್ಹುಡ್ ಇನ್ ಅವರ್ ಟೈಮ್ಸ್’ ಅನ್ನು ಸಹ ನಿಷೇಧಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ಸುಧೀರ ಹೇರೇಕರ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.