Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಿಂಪಡೆಯುವಂತೆ ಆಗ್ರಹ

localview news

ಬೆಳಗಾವಿ:ದ್ವಿತೀಯ ಪಿಯುಸಿ ಮದ್ಯ ವಾರ್ಷಿಕ ಪರೀಕ್ಷೆಯನ್ನು ಬೋರ್ಡ್ ಪರೀಕ್ಷೆಯಾಗಿ ನಡೆಸುವ ಹಠಾತ್ ಹೇರಿಕೆ ಹಿಂಪಡೆಯುವಂತೆ ಬುಧವಾರ ಎಐಡಿಎಸ್ಓ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ದಿನಾಂಕ 12/11/2021 ರಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು, ದ್ವಿತೀಯ ಪಿಯು ಮದ್ಯ ವಾರ್ಷಿಕ ಪರೀಕ್ಷೆ-20121ರ ಮರು ವಿನ್ಯಾಸದ ಕುರಿತು ಸುತ್ತೋಲೆ ಹೊರಡಿಸಿದೆ. ಆ ಸುತ್ತೋಲೆಯ ಪ್ರಕಾರ, ಈಗ ನಡೆಯುವ ಮದ್ಯವಾರ್ಷಿಕ ಪರೀಕ್ಷೆಯನ್ನು ರಾಜ್ಯ ಬೋರ್ಡ್ ಪರೀಕ್ಷೆಯಾಗಿ ನಡೆಸಲಾಗುವುದು. ಅಂದರೆ, ಪ್ರಶ್ನೆ ಪತ್ರಿಕೆಗಳು ಕೇಂದ್ರ ಕಛೇರಿಯಿಂದ ಬರುತ್ತದೆ ೨೯ ನವೆಂಬರ್‌ನಿಂದ ಪರೀಕ್ಷೆ ನಡೆಯಲಿದೆ.

ಅಂದರೆ, ಕೇವಲ ೧೫ ದಿನಗಳಲ್ಲಿ ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಏಕಾಏಕಿ, ಯಾವುದೇ ಪೂರ್ವ ಸೂಚನೆ ಇಲ್ಲದೇ, ಪೂರ್ವ ತಯಾರಿ ಇಲ್ಲದೇ ಬೋರ್ಡ್ ಪರೀಕ್ಷೆಯೊಂದನ್ನು ಎದುರಿಸಲು ಸಿದ್ಧರಾಗಬೇಕು!! ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಸ್ತುತ ದ್ವಿತೀಯ ಪಿಯುಸಿ ಬ್ಯಾಚ್ ತಮ್ಮ ಮೊದಲ ಪಿಯು ಪರೀಕ್ಷೆಗಳನ್ನು ಬರೆಯದೇ ಬಡ್ತಿ ಹೊಂದಿದ್ದಾರೆ. ಎರಡು ವರ್ಷಗಳು ಪರೀಕ್ಷೆಗಳನ್ನು ಬರೆಯಲು ಆಗದೆ, ಬರವಣಿಗೆ ಅಭ್ಯಾಸ ಇರದೆ ಪ್ರಸ್ತುತ ಎರಡನೇ ಪಿಯುಸಿಗೆ ತೇರ್ಗಡೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ಕಲಿಕಾ ಪ್ರಕ್ರಿಯೆ ಹಾಗು ಕಲಿಕಾ ವಿಧಾನ ಸ್ವಲ್ಪ ಮಟ್ಟಿಗೆ ನಿಧಾನವಾಗಿದೆ ಮತ್ತು ಪರೀಕ್ಷೆಗೆ ಸಜ್ಜಾಗಲು ಹೆಚ್ಚಿನ ಸಮಯದ ಅಗತ್ಯ ಈ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಇದೆ.

ದ್ವಿತೀಯ ಪಿಯು ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ, ಮೇ ೩ನೇ ವಾರ ತರಗತಿಗಳು ಆರಂಭವಾಗಿ, ಮಾರ್ಚ್ ೩ನ ವಾರಕ್ಕೆ ಅಂತಿಮ ಪರೀಕ್ಷೆಗಳು ನಡೆಯುತ್ತದೆ. ಈಗ ಕೋವಿಡ್ ಹಿನ್ನೆಲೆಯಲ್ಲಿ, ತರಗತಿಗಳು ಆರಂಭವಾಗಿದ್ದೇ ಆಗಸ್ಟ್ ೩ನೇ ವಾರಕ್ಕೆ, ಏಪ್ರಿಲ್‌ಗೆ ಅಂತಿಮ ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. ಅಂದರೆ ಕಾಲೇಜು ಪುನರಾರಂಭ ಮೂರು ತಿಂಗಳು ವಿಳಂಬವಾಗಿದೆ.

ಇದರಿಂದ ತಯಾರಿ ಸಮಯ, ಪಾಠದ ಸಮಯ ಎಲ್ಲವೂ ಕುಗ್ಗಿದೆ. ಹೀಗಾಗಿ ರಾಜ್ಯದ ಹಲವು ಕಾಲೇಜುಗಳಲ್ಲಿ ಪಠ್ಯಕ್ರಮ ಪೂರ್ಣಗೊಂಡಿಲ್ಲ. ಪರೀಕ್ಷೆಗೆ ಸಮರ್ಪಕವಾದ ತಯಾರಿ ನಡೆಸಲು ಸಾಧ್ಯವಾಗಿಲ್ಲ. ಹೀಗಿರುವಾಗ, ರಾಜ್ಯ ಸರ್ಕಾರದ ಮದ್ಯ ವಾರ್ಷಿಕವು ಬೋರ್ಡ್ ಪರೀಕ್ಷೆ ರೀತಿ ನಡೆಯುತ್ತದೆ ಎಂಬ ಹಠಾತ್ ನಿರ್ಧಾರವು ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪೋಷಕರಲ್ಲಿ ಅತೀವ ಆತಂಕ ಸೃಷ್ಟಿಸಿದೆ.

ಈ ಹಠಾತ್ ಹೇರಿಕೆಯು ಆತಂಕ, ದುಗುಡ ಹಾಗೂ ಖಿನ್ನತೆಯನ್ನು ಸೃಷ್ಟಿಸಿ, ಮಾನಸಿಕ ಒತ್ತಡವನ್ನು ಹೇರಿದೆ. ಸಿಬಿಎಸ್‌ಇ ಅಥವಾ ಐಸಿಎಸ್‌ಸಿ ಮಂಡಳಿಗಳು, ಶೈಕ್ಷಣಿಕ ವರ್ಷ ಆರಂಭವಾಗುವ ಸಮಯದಲ್ಲೇ, ಪರೀಕ್ಷೆ, ಮೌಲ್ಯಮಾಪನದಲ್ಲಿ ಅಳವಡಿಸಿಕೊಳ್ಳುವ ಬದಲಾವಣೆಗಳ ಕುರಿತು ಮುನ್ಸೂಚನೆ ನೀಡಿದ್ದರು, ಆದರೆ, ಪಿಯು ಮಂಡಳಿ ಅಂತಹ ಯಾವುದೇ ನಿರ್ಣಯದ ಬಗ್ಗೆ ವರ್ಷ ಆರಂಭವಾಗುವಾಗ ಹೇಳದ ಈಗ ಹಠಾತ್ ಬದಲಾವಣೆ ಮಾಡುತ್ತೇವೆ ಎನ್ನುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗುತ್ತದೆ.

ಈ ಹಠಾತ್ ಬದಲಾವಣೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಹಲವು ಶಿಕ್ಷಣ ತಜ್ಞರು, ಉಪನ್ಯಾಸಕರ ಅಭಿಪ್ರಾಯ. ಹಾಗಾಗಿ, ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯ, ಮಾನಸಿಕ ಆರೋಗ್ಯ ಹಾಗೂ ಪೋಷಕರು, ಉಪನ್ಯಾಸಕರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಯಥಾಪ್ರಕಾರ ಪ್ರತಿ ವರ್ಷದಂತೆ ಅಂತಿಮ ಪರೀಕ್ಷೆಯನ್ನು ಮಾತ್ರ ಪಬ್ಲಿಕ್ ಪರೀಕ್ಷೆಯಾಗಿ ಮಾಡಿ, ಮದ್ಯ ವಾರ್ಷಿಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ, ವಿಕೇಂದ್ರೀಕೃತ ಪ್ರಕ್ರಿಯೆಯಲ್ಲಿ ನಡೆಸಬೇಕು ಎಂದು ಎಐಡಿಎಸ್‌ಓ ಹಾಗೂ ರಾಜ್ಯದ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಬೇಡಿಕೆಗಳು ಕೇಳಿಗಿನಂತಿವೆ
೧. ಯಥಾಪ್ರಕಾರದಂತೆ ಮದ್ಯ ವಾರ್ಷಿಕ ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ, ವಿಕೇಂದ್ರೀಕೃತವಾಗಿ ನಡೆಸಿ, ಇದರ ಮೌಲ್ಯಮಾಪನ ಅಂತಿಮ ಪರೀಕ್ಷೆಗೆ ಒಳಪಡುವುದು ಬೇಡ.
೨. ಶೈಕ್ಷಣಿಕ ವೇಳಾಪಟ್ಟಿಯನ್ನು ವಿಸ್ತರಿಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳನ್ನು ಜೂನ್ ತಿಂಗಳಿಗೆ ನಿಗದಿಪಡಿಸಿ ಎಂದು ಮನವಿ ಮಾಡಿದ್ದಾರೆ.