Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಂಗಳಮುಖಿಯರ ಸ್ವಾವಲಂಬನೆಯ ಬದುಕಿಗಾಗಿ ಫುಡ್ ಕಾರ್ಟ್ ಕ್ಯಾಂಟೀನ್

localview news

ಬೆಳಗಾವಿ: ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಮಂಗಳಮುಖಿಯರ ಜೀವನ ಆರ್ಥಿಕ ತೊಂದರೆ ಜೊತೆಗೆ ಜೀವನೋಪಾಯದ ದಾರಿಯೇ ಇಲ್ಲದಂತಾಗಿದ್ದು, ಅವರ ಜೀವನದ ಆಧಾರಕ್ಕೆ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ತಿನಿಸು ಕಟ್ಟೆಯ ಮಾದರಿಯಲ್ಲಿ ಫುಡ್ ಕಾರ್ಟ್(ಕ್ಯಾಂಟೀನ್) ನೆರವು ನೀಡವ ಮೂಲಕ ಸಮಾಜದ ಜೊತೆ ಬೆರೆತು ಬದುಕು ನಡೆಸಲು ನೆರವು ಮಾಡಿಕೊಟ್ಟರು.

ನಗರದಲ್ಲಿ ಬುಧವಾರ (ನ.17) ಕೇಂದ್ರ ಬಸ್ ನಿಲ್ದಾಣ ಪಕ್ಕ ಹಳೆ ತರಕಾರಿ ಮಾರುಕಟ್ಟೆ ಎದುರಿಗೆ ಬೆಳಗಾವಿ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಫುಡ್ ಕಾರ್ಟ್ ಕ್ಯಾಂಟೀನ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಮಂಗಳಮುಖಿ ಕಿರಣ್ ಬೇಡಿ ಎಲ್ಲರಂತೆ ನಮ್ಮನ್ನೂ ನೋಡಿ, ಬಸ್, ರೈಲು ಪ್ರಯಾಣಿಸುವಾಗ ಪುರುಷರ ಪಕ್ಕದಲ್ಲೇ ಕೂರಬೇಕೋ ಅಥವಾ ಸ್ತ್ರೀಯರ ಪಕ್ಕದ ಸೀಟಿನಲ್ಲಿ ಕೂರಬೇಕೊ? ರೈಲಿನಲ್ಲಂತೂ ಟಿಕೇಟ್ ಪಡೆದರೂ ಬಾಗಿಲಿನಲ್ಲಿಯೇ ಕುಳಿತು ಪ್ರಯಾಣಿಸಬೇಕು. ಇನ್ನು ಸಾರ್ವಜನಿಕ ಸ್ಥಳದಲ್ಲಿರುವ ಶೌಚಾಲಯಗಳಲ್ಲಿ ಕೂಡ ಸ್ವಯಂ ಬಹಿಷ್ಕಾರ. ಹಣ ಕೊಟ್ಟು ಒಳ್ಳೆಯ ಹೋಟೆಲಗೆ ಹೋಗಬೇಕೆಂದರೂ ಎಲ್ಲರಂತೆ ಪ್ರವೇಶ ನೀಡುವುದಿಲ್ಲರಸ್ತೆಯ ಬದಿಯಲ್ಲಿಯೇ ಊಟ ಮಾಡಬೇಕು.

ನಮ್ಮಿಂದ ಯಾರಿಗೂ ತೊಂದರೆ ಇಲ್ಲವೆಂದು ಗೊತ್ತಿದ್ದರೂ ಈ ಸಮಾಜ ನಮ್ಮನ್ನು ಪ್ರತ್ಯೇಕವಾಗಿಸಿದೆ. ನಮ್ಮ ಸಹಾಯಕ್ಕೆ ಸರ್ಕಾರ, ಸಂಘ ಸಂಸ್ಥೆಗಳು ನೆರವಿಗೆ ಬರಬೇಕು. ಸಮಾಜದಲ್ಲಿ ನಮಗೂ ಸಮಾನತೆಯಿದೆ ಜನರ ಪರಿಕಲ್ಪನೆ ಬದಲಾಗಬೇಕು ಮಂಗಳಮುಖಿಯರ ಸಂಕಷ್ಟಕ್ಕೆ ಸ್ಪಂದಿಸಬೇಕು. ಸಾಮಾಜಿಕವಾಗಿ ಜನರ ದೃಷ್ಟಿಕೋನ ಬದಲಾಗಬೇಕು, ನಮಗೂ ಸ್ವಾವಲಂಬಿ ಜೀವನ ನಡೆಸಲು ಸಮಾಜ ಅವಕಾಶ ಮಾಡಿಕೊಟ್ಟು ಪ್ರೋತ್ಸಾಹಿಸಬೇಕು ಎಂದು ಮನದ ಇಂಗಿತ ವ್ಯಕ್ತಪಡಿಸಿದರು.

ಸರ್ಕಾರದಿಂದ ಈಗಾಗಲೇ ರೂ.600 ಮಾಸಿಕ ವೇತನ ನೀಡಲಾಗುತ್ತಿದೆ. ಈವತ್ತಿನ ದಿನಮಾನಗಳಲ್ಲಿ ವೇತನ ದಿನಸಿಗೂ ಸಾಲುವುದಿಲ್ಲ ನಮ್ಮಲ್ಲಿಯೂ ಕೆಲವರು ಒಳ್ಳೆಯ ವಿದ್ಯಾವಂತರಿದ್ದಾರೆ. ಅವರುಗಳ ಬಾಡಿ ಲಾಂಗ್ವೇಜ್ ಗುರುತಿಸುವದಕ್ಕಿಂತ ಅವರಲ್ಲಿಯ ಜ್ಞಾನ ಗುರುತಿಸಿ ಇತ್ತೀಚೆಗೆ ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆದು ಎಲ್ಲರಿಗೆ ಮಾದರಿಯಾಗಿದ್ದಾರೆ.

ಇನ್ನು ಕೆಲವು ಕಡೆ ಪಿಎಸ್ಐ ಆಗಿದ್ದಾರೆ, ಕಾರ್ಪೊರೇಟ್ ಆಗಿದ್ದಾರೆ. ಇನ್ನೊಂದು ಕಡೆ ಮಂಗಳಮುಖಿಯರು ಎಂದರೆ ಶುಭ ಶಕುನ ಪ್ರತಿಯೊಂದು ಕಾರ್ಯದಲ್ಲಿ ಇವರನ್ನು ನೋಡಿದ್ರೆ ಎಲ್ಲ ಒಳ್ಳೆಯದು ಆಗುತ್ತೆ ಎಂಬ ಮನೋಭಾವನೆಯಿದೆ. ಅದಕ್ಕೆ ನಾವು ಮಾಡಿದ ಈ ಉಪಹಾರ ಸೇವಿಸಿ ನಾವು ನಿಮ್ಮರು ಎಂದು ತಿಳಿದು ನಮ್ಮ ಈ ಕಾಯಕಕ್ಕೆ ಸಹಾಯ, ಸಹಕಾರ ನೀಡಿ ಎಂದು ಮನವಿ ಮಾಡಿದರು.

ಈ ವೇಳೆ ಇನ್ನರ್ ವ್ಹೀಲ್ ಕ್ಲಬ್ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತೆ ಗೌರಿ ಗಜಬರ, ತಾನಾಜಿ ಹಾಗೂ ಇನ್ನಿತರರು ಇದ್ದರು.

ಈ ತೃತೀಯಲಿಂಗಿಗಳು ಪ್ರೌಢಾವಸ್ಥೆಯ ಬೆಳವಣಿಗೆಯ ಸಂದರ್ಭದಲ್ಲಿ ಕೆಲವೊಬ್ಬರಿಗೆ ಮಾತ್ರ ಸಂಭವಿಸುವ ಹಾರ್ಮೋನ್ಗಳ ವೈಪರಿತ್ಯದ ಸ್ಥಿತಿಯೇ ಇದಕ್ಕೆ ಕಾರಣವಾಗಿದೆ. ಅವರು ಹಾಗೆ ವರ್ತಿಸುವ ಮಾತ್ರಕ್ಕೇ ಅವರು ಅಸಮರ್ಥರಲ್ಲ. ಮಾನಸಿಕವಾಗಿ, ಬೌದ್ಧಿಕವಾಗಿ ಯಾರಿಗೇನು ಕಮ್ಮಿಯಿಲ್ಲ. ಅವರಲ್ಲೂ ವ್ಯವಹಾರಿಕ ಜ್ಞಾನವಿದೆ. ಸೌಂದರ್ಯ ಪ್ರಜ್ಞೆಯಿದೆ. ಅಂಜಿಕೆಯೂ ಇದೆ. ಇದೆಲ್ಲದರ ಮಧ್ಯೆ ಸ್ವಾವಲಂಬಿಯಾಗಿ ಬದುಕಬೇಕು ಎಂದು ಮಹದಾಕಾಂಕ್ಷೆಯೂ ಇದೆ. ಆದರೆ ಅದಕ್ಕೆ ಪ್ರಜ್ಞಾವಂತ ಸಮುದಾಯ ಬೆಂಬಲಿಸಬೇಕಷ್ಟೆ ಎಂಬುವುದು ನಮ್ಮ ಕಳಕಳಿಯಾಗಿದೆ.