Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿಟ್ ಕಾಯಿನ್ ಬಗ್ಗೆ ಸ್ಟಡಿ ಮಾಡಿ ಹೇಳ್ತೇನಿ: ಮಾಜಿ ಸಚಿವ ರಮೇಶ

localview news

ಚಿಕ್ಕೋಡಿ :ರಮೇಶ ಜಾರಕಿಹೊಳಿ ಕಾಗವಾಡ ಮತಕ್ಷೇತ್ರದ ಕಾರ್ಯಕರ್ತರಿಗೆ ಬೇಟಿ. ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬೇಟಿ ನೀಡುತ್ತಿರುವ ಶಾಸಕ ರಮೇಶ ಜಾರಕಿಹೊಳಿ

ಕಾಗವಾಡ ತಾಲೂಕಿನ ಶಿರಗುಪ್ಪಿ, ಉಗಾರ ಹಾಗೂ ಉಗಾರ ಬಿ.ಕೆ ಗ್ರಾಮಗಳಿಗೆ ಬೇಟಿ ನೀಡಿದರು.
ಮಾಜಿ ಶಾಸಕ, ಕಾಂಗ್ರೆಸ್ ನಾಯಕ ರಾಜು ಕಾಗೆ ಮನೆಗೆ ಬೇಟಿ ನೀಡಿದ ರಮೇಶ ಜಾರಕಿಹೊಳಿ. ರಾಜು ಕಾಗೆ ಮನೆಯಲ್ಲಿ ರಮೇಶ ಜಾರಕಿಹೊಳಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ‌ ಗುಪ್ತ ಚರ್ಚೆ . ಗುಪ್ತ ಚರ್ಚೆ ಬಳಿಕ ರಮೇಶ ಜಾರಕಿಹೊಳಿ‌ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ರಾಜು ಕಾಗೆ ಅವರಿಗೆ ಅನಾರೋಗ್ಯ ಹಿನ್ನಲೆಯಲ್ಲಿ ಬೇಟಿಗೆ ಬಂದಿದ್ದೇನೆ ಇದರಲ್ಲಿ ಯಾವುದೇ ರಾಜಕೀಯವಿಲ್ಲ. ವಿಧಾನಪರಿಷತ್ ಚುನಾವಣೆ ವಿಚಾರ ಕಾಂಗ್ರೆಸ್‌ನಿಂದ ಲಕ್ಷ್ಮೀ ಹೆಬ್ಬಾಳಕರ ತಮ್ಮ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆಯಿಂದ ಲಖನ ಅವರಿಗೆ ಮುಳವಾಗುತ್ತಾ ವಿಚಾರಕ್ಕೆ ಹೆಬ್ಬಾಳಕ್ಕರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ.

ನಮ್ಮ ಪಕ್ಷದಿಂದ ಮಹಾಂತೇಶ ಕವಟಗಿ‌ಮಟ ಸ್ಪರ್ಧೆ ಮಾಡುತ್ತಾರೆ. ನಾವೂ ಲಖನ ಜಾರಕಿಹೊಳಿ ಅವರಿಗೆ ವಿಧಾನಪರಿಷತ ಚುನಾವಣೆಗೆ ಸ್ಪರ್ಧಿಸಲು ಟಿಕೇಟ್ ಕೇಳಿಲ್ಲ. ನಾನಂತೂ ಮಹಾಂತೇಶ ಕವಟಗಿಮಟ ಪರವಾಗಿ ಪ್ರಚಾರ ಮಾಡುತ್ತೇನೆ .

ಈಗಾಗಲೇ ಪ್ರತಿ ತಾಲೂಕಿಗೂ ಹೋಗಿ ಪ್ರಚಾರ ಮಾಡುತ್ತಿದ್ದೇವೆ.ಲಖನ ಜಾರಕಿಹೊಳಿ ಪಕ್ಷೇತರ ಸ್ಪರ್ಧೆ ವಿಚಾರ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಒಬ್ಬರು ಸ್ಪರ್ಧೆ ಮಾಡುತ್ತಾರೆ.

ಮತ್ತೊಂದು ಬೆಂಬಲವನ್ನು ವರಿಷ್ಟರ ನಿರ್ಣಯ ಮೇಲೆ ಇದೆ. ಅವರು ಯಾರಿಗೆ ಬೆಂಬಲ ನೀಡು ಎನ್ನುತ್ತಾರೆ ಅವರಿಗೆ ನೀಡುತ್ತೇವೆ .ಬಿಟ್ ಕಾಯಿನ್ ವಿಚಾರ ರಾಜಕೀಯ ದೃಷ್ಟಿಯಿಂದ ಹೇಳುವುದಾದರೆ ಬಿಟ್ ಕಾಯಿನ್ ಅಂದರೇನು ನನಗೆ ಗೊತ್ತೆ ಇಲ್ಲಾ .ಬಿಟ್ ಕಾಯಿನ್ ಬಗ್ಗೆ ಸ್ಟಡಿ ಮಾಡಿ ಹೇಳತ್ತಿನಿ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಗ್ರಾಮದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ರಮೇಶ ಜಾರಕಿಹೊಳಿ.