ರೈತ ವಿರೋಧಿ ಕಾಯ್ದೆಯನ್ನು ರದ್ದು ಮಾಡಿದ ಪ್ರಧಾನಿ ನವದೆಹಲಿ
ದೆಹಲಿ : ಕಳೆದೊಂದುವರೆ ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕಾರಣವಾಗಿದ್ದ ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರಕಾರ ರದ್ದುಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನಾನೇನು ಮಾಡಿದ್ದೇನೋ ಅದೆಲ್ಲವನ್ನೂ ನಾನು ರೈತರಿಗಾಗಿ ಮಾಡಿದ್ದೇನೆ, ನಾನು ಮಾಡುತ್ತಿರುವುದು ದೇಶಕ್ಕಾಗಿ, ನಿಮ್ಮ ಆಶೀರ್ವಾದದಿಂದ, ನಾನು ನನ್ನ ಶ್ರಮದಲ್ಲಿ ಏನನ್ನೂ ಕಡಿಮೆ ಮಾಡಲಿಲ್ಲ. ಇಂದು ನಾನು ನಿಮಗೆ ಭರವಸೆ ನೀಡುತ್ತೇನೆ.
ನಾನು ಈಗ ಇನ್ನಷ್ಟು ಶ್ರಮಿಸುತ್ತೇನೆ, ಆದ್ದರಿಂದ ನಿಮ್ಮ ಕನಸುಗಳು, ಮತ್ತು ರಾಷ್ಟ್ರದ ಕನಸುಗಳನ್ನು ನನಸಾಗಿಸಬಹುದು” ಎಂದು ಪ್ರಧಾನಿ ಮೋದಿ ಹೇಳಿದರು.