Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೃಷಿ ಕಾನೂನು ಹಿಂಪಡೇ: ಸರ್ವ ಪಕ್ಷಗಳಿಂದ ಟ್ವಿಟಗಳ ಸುರಿಮಳೆ

localview news

ಬೆಳಗಾವಿ: ಪ್ರಧಾನಿ ಮೋದಿ ಕೃಷಿ ಕಾನೂನನ್ನು ಹಿಂದೆ ತೆಗುಯುತ್ತಾರೆ ಎಂದು ಘೋಷಣೆ ಮಾಡಿದ ಕ್ಷಣದಿಂದ್ ಸರ್ವ ಪಕ್ಷಗಳ ಮುಖಂಡರು ನಾ ಮುಂದೆ ನಿ ಮುಂದೆ ಅಂತ ಟ್ವಿಟಗಳ ಸುರಿ ಮಳೆಗೈದಿದ್ದಾರೆ.

ಸತ್ಯಾಗ್ರಹದಿಂದ ದೇಶದ ಅನ್ನದಾತ ದುರಹಂಕಾರದ ತಲೆ ತಗ್ಗಿಸಿದ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು! ಜೈ ಹಿಂದ್, ಜೈ ಹಿಂದ್ ಕಿಸಾನ್ ಎಂದು ರಾಹುಲ್ ಗಾಂದಿ ಟ್ವಿಟ್ ಮಾಡಿದ್ದಾರೆ.

ಇಂದು ಬೆಳಕಿನ ದಿನದಂದು ಎಷ್ಟು ದೊಡ್ಡ ಸುದ್ದಿ ಸಿಕ್ಕಿತು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಯಿತು ಮತ್ತು 700ಕ್ಕೂ ಹೆಚ್ಚು ರೈತರು ಹುತಾತ್ಮರಾದರು. ಅವರ ಹುತಾತ್ಮತೆ ಅಮರವಾಗಿರುತ್ತದೆ. ರೈತರು ಮತ್ತು ರೈತರನ್ನು ಉಳಿಸಲು ಈ ದೇಶದ ರೈತರು ತಮ್ಮ ಜೀವನವನ್ನು ಹೇಗೆ ಸಾಲಿನಲ್ಲಿ ಇಟ್ಟಿದ್ದಾರೆ ಎಂಬುದನ್ನು ಮುಂಬರುವ ಪೀಳಿಗೆಗಳು ನೆನಪಿಸಿಕೊಳ್ಳುತ್ತವೆ. ನನ್ನ ದೇಶದ ರೈತರಿಗೆ ನಾನು ನಮಸ್ಕರಿಸುತ್ತೇನೆ ಎಂದು ದೆಹಲಿ ಸಿಎಂ ಕೇಜ್ರಿವಾಲ್ ಟ್ವಿಟ್ ಮೂಲಕ ತಿಳಿಸಿದ್ದಾರೆ

ರೈತ ಮತ್ತು INCIndia ಅವರ ನಿರಂತರ ವಿರೋಧದ ಪರಿಣಾಮವಾಗಿನರೇಂದ್ರ ಮೋದಿ ಮತ್ತು ಬಿಜೆಪಿ ರೈತ-ವಿರೋಧಿ ಕಾನೂನುಗಳನ್ನು ಹಿಂಪಡೆದಿದ್ದಾರೆ ನಮ್ಮ ದೇಶದ ಎಲ್ಲಾ ರೈತರು, ಕಾಂಗ್ರೆಸ್ ನಾಯಕರು ಮತ್ತು ಕಾಳಜಿಯುಳ್ಳ ನಾಗರಿಕರಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳು ಎಂದು ಸಿದ್ದರಾಮಯ್ಯ ಟ್ವಿಟ್ ಮೂಲಕ ತಿಳಿಸಿದ್ದಾರೆ.

ರೈತರ ಆಕ್ರೋಶಕ್ಕೆ ಗುರಿಯಾಗಿದ್ದ 3 ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕೊನೆಗೂ ಕೇಂದ್ರಕ್ಕೆ ಜ್ಞಾನೋದಯ ಆಗಿರುವುದು ಉತ್ತಮ ಬೆಳವಣಿಗೆ. ರೈತರ ಜತೆ ಚರ್ಚೆ ನಡೆಸದೇ ಈ ಕಾಯ್ದೆಗಳ ಏಕಪಕ್ಷೀಯ ಜಾರಿ & ಈಗ ಏಕಾಎಕಿ ರದ್ದತಿ ಅನೇಕ ಪ್ರಶ್ನೆ ಹುಟ್ಟುಹಾಕಿದೆ ಎಂದು ಎಚ ಡಿ ಕುಮಾರಸ್ವಾಮಿ ಟೀಟ ಮೂಲಕ ಪ್ರಶ್ನೆ ಮಾಡಿದ್ದಾರೆ.

BJP4India ನಿಮ್ಮನ್ನು ನಡೆಸಿಕೊಂಡ ಕ್ರೌರ್ಯದಿಂದ ಕಂಗೆಡದೆ ಅವಿರತ ಹೋರಾಟ ನಡೆಸಿದ ಪ್ರತಿಯೊಬ್ಬ ರೈತನಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇದು ನಿಮ್ಮ ವಿಜಯವಾಗಿದೆ! ಈ ಹೋರಾಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ನನ್ನ ಆಳವಾದ ಸಂತಾಪಗಳು ಎಂದು ಮಮತಾ ಬಬ್ಯಾನರ್ಜಿ ಟ್ವಿಟ್ ಮಾಡಿದ್ದಾರೆ.

ಇದು ರೈತರ ಗೆಲುವು .. ಪ್ರತಿಭಟನೆಯ ವೇಳೆ ಪ್ರಾಣಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವಂತೆ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ ಎಂದು ರಣದೀಪ್ ಸಿಂಗ್ ಟ್ವಿಟ್ ಮಾಡಿದ್ದಾರೆ.