ಕೃಷಿ ಮಸೂದೆ ಹಿಂಪಡೆದ ಮೋದಿ: ಬಲೂನ್ ಹಾರಿಸಿ ಸಂಭ್ರಮ
ಬೆಳಗಾವಿ:ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ಮಸೂದೆಯನ್ನು ಹಿಂಪಡೆದಿರುವುದಕ್ಕೆ ಬೆಳಗಾವಿ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಬಲೂನ್ ಹಾರಿಸುವುದರ ಮೂಲಕ ಸಿಹಿ ಹಂಚಿ ಸಂಭ್ರಮಿಸಿದರು.
ಕಳೆದೊಂದುವರೆ ವರ್ಷದಿಂದ ದೇಶದ ಮೂಲೆ ಮೂಲೆಯಲ್ಲಿ ರೈತರು ಕೃಷಿ ಮಸೂದೆ ಕಾಯ್ದೆಯನ್ನು ಹಿಂಪಡೆಯಬೇಕೆಂದು ಮಳೆ, ಗಾಳಿ, ಚಳಿ, ಬಿಸಿಲು ಎನ್ನದೆ ಹೋರಾಟ ನಡೆಸಿದರು. ರೈತರಿಗೆ ಮಾರಕವಾಗಿರುವ ಕೃಷಿ ಮಸೂದೆಯನ್ನು ಮಂಡಿಸಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಕೇಂದ್ರ ಸರಕಾರ ಕೊನೆಗೂ ಕೃಷಿ ಮಸೂದೆ ಕಾಯ್ದೆಯನ್ನು ಹಿಂಪಡೆದಿದ್ದರು ಸಂತಸದ ಸಂಗತಿ.ಕೃಷಿ ಮಸೂದೆ ಹೋರಾಟದ ಸಂದರ್ಭದಲ್ಲಿ ಸಾಕಷ್ಟು ಜನ ರೈತರು ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ಕೇಂದ್ರ ಸರಕಾರ ತಲಾ 25 ಲಕ್ಷ ರು.ಗಳನ್ನು ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ಆಯಿಷಾ ಸನದಿ, ರೇಷ್ಮಾ ತಟಗಾರ, ಸೌಜನ್ಯಾ ಜೋಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.