Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಕಾಲಿಕ ಮಳೆ ಖಾನಾಪುರ ರೈತರ ಬೆಂಬಲಕ್ಕೆ ನಿಂತ ಡಾ.ಸರ್ನೋಬೊತ್

localview news

ಬೆಳಗಾವಿ : ಖಾನಾಪುರ ತಾಲೂಕಿನಲ್ಲಿ ಅಕಾಲಿಕ ಮಳೆಯಿಂದ ಭತ್ತ ಹಾಗೂ ಕಬ್ಬು ಬೆಳೆಗಳು ಅಪಾರ ನಷ್ಟವಾಗಿದ್ದು ನಿನ್ನೆ ನಂದಗಡದಲ್ಲಿ ಬೆಳೆ ನಷ್ಟದಿಂದ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು ಡಾ ಸೋನಾಲಿ ಸರ್ನೋಬತರವರು ಡಿಸಿ ವೆಂಕಟೇಶ್ ಕುಮಾರವರನ್ನು ಬೆಟ್ಟಿಯಾದರು ಮತ್ತು ಡಿ ಸಿಯವರು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು ಮತ್ತು ತಕ್ಷಣವೆ ತಪಾಸಣೆ ಕಾರ್ಯವನ್ನು ಪ್ರಾರಂಭಿಸಲಾಗುವುದು ಮತ್ತು ಆಡಳಿತವು ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಕಕ್ಕೇರಿ, ಇಟಗಿ, ಪಾರಿಶ್ವಾಡದ ರೈತರು ಉಪಸ್ಥಿತರಿದ್ದರು. ಬಿಜೆಪಿ ಕಾರ್ಯ ಕರ್ತರಾದ ಶ್ರೀ ಈಶ್ವರ ಸಾನಿಕೋಪ್, ಬಸವರಾಜ ಕಡೇಮನಿ, ಬಾಳೇಶ್ ಚವ್ಹಾಣ್ಣವರ, ರುದ್ರಗೌಡ ಪಾಟೀಲ್, ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷ ಡಾ.ಸೋನಾಲಿ ಸರ್ನೋಬತ್ ಉಪಸ್ಥಿತರಿದ್ದರು.