Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಸಾಪ ಚುನಾವಣೆಯಲ್ಲಿ ಗೋಲ್ ಮಾಲ್..!

localview news

ಅಥಣಿ:  ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಸ್ಥಾನದ ಚುಣಾವಣೆಗೆ ಅಥಣಿಯಲ್ಲಿ ಶಾಂತರೀತಿಯಲ್ಲಿ ಮತದಾನ ನಡೆಯುತ್ತಿದ್ದು ಈ ಮಧ್ಯ ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ರವೀಂದ್ರ ತೋಟಗೇರ ಅವರಿಗೆ ಮತ ಹಾಕಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗುತ್ತಿದ್ದು ಬೆಳಗಾವಿ ಭಾಗದಲ್ಲಿ ಎಲ್ಲರೂ ರವೀಂದ್ರ ತೋಟಗೇರ ಅವರಿಗೆ ಹರಸಿದ್ದಾರೆ ಎಂಬ ಸುದ್ದಿಯೂ ಕೂಡ ಹರಿದಾಡುತ್ತಿದೆ.

ತಾಲೂಕಿನಾದ್ಯಂತ ಈ ಬಾರಿ ಸುಮಾರು 818 ಜನ ಮತದಾರರಿದ್ದು ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ 04 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು ರಾಜ್ಯಾಧ್ಯಕ್ಷ ಸ್ಥಾನಕ್ಕೆ 21 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪ್ರತಿಯೊಬ್ಬ ಮತದಾರ ಎರಡು ಮತಗಳನ್ನು ಒಂದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತೊಂದು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚಲಾವಣೆ ಮಾಡುತ್ತಿದ್ದು ಅದರಲ್ಲಿ ಯಾರೋ ಒಬ್ಬರು ರವೀಂದ್ರ ತೋಟಗೇರ್ ಅವರಿಗೆ ಮತಹಾಕಿದ ದೃಶ್ಯವನ್ನು ಸೆರೆಹಿಡದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಅಥಣಿ ತಹಶಿಲ್ದಾರ ಕಛೇರಿ ಆವರಣದಲ್ಲಿ ನಡೆಯುತ್ತಿರುವ ಈ ಮತದಾನ ಪ್ರಕ್ರಿಯೆಯಲ್ಲಿನ ದೃಶ್ಯ ವೈರಲ್ಲಾಗಿದ್ದು ಅಥಣಿ ಜನತೆ ಮಂಗಲಾ ಮೆಟಗುಡ್ಡ ಅವರನ್ನು ತಿರಸ್ಕರಿಸಿ ರವೀಂದ್ರ ತೋಟಗೇರ ಅವರಿಗೆ ಹರಸಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. !