Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಿದ್ದು ವಿರುದ್ಧ ಗುಡುಗಿದ ರಾಜಾಹುಲಿ

localview news

ಬೆಳಗಾವಿ:ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದರು.

ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಬಿಜೆಪಿಯವರು ಟೂರಿಂಗ್ ಟಾಕೀಸ್ ತರ ಜನ ಸ್ವರಾಜ್ಯ ಯಾತ್ರೆ ಮಾಡುತ್ತಿದ್ದಾರೆ. ಇದು ಜನ ಬರ್ಬಾದ್ ಯಾತ್ರೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಿದ್ದರಾಮಯ್ಯ ನವರಿಗೆ ಕೇಳುತ್ತೇನೇ ವಿಧಾನ ಪರಿಷತ್ ‌ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು‌ ಘೋಷಣೆ ‌ಮಾಡುವ ಯೋಗ್ಯತೆ ಇಲ್ಲ ಕಾಂಗ್ರೆಸ್ ನಾವು ಹೋದ ಎಲ್ಲಾ ಕಡೆಗಳಲ್ಲಿ ಅತಿವೃಷ್ಠಿಯ ವರದಿಯನ್ನು ಸಂಗ್ರಹ ಮಾಡುತ್ತಿದ್ದೇವೆ.ಎರಡು ದಿನದಲ್ಲಿ ರಾಜ್ಯದ ಅತಿವೃಷ್ಠಿ ವರದಿಯನ್ನು ಕೇಂದ್ರ, ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ ಎಂದ ಅವರು, ಜನ ಬೆಂಬಲ ಇಲ್ಲ ಎಂದು ಗೊತ್ತಾದ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಬಿಜೆಪಿಯ ಜನಸ್ವರಾಜ್ ಸಮಾರಂಭ ಬೆಳಗಾವಿಯಲ್ಲಿ ಮುಗ್ತಾಯವಾಗುತ್ತದೆ.ನಾಲ್ಕು ತಂಡಗಳಿಂದ ಮೊದಲ ಬಾರಿಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಎರಡೇರಡು ಕ್ಷೇತ್ರಗಳಲ್ಲಿ ನಮ್ಮ ಮುಂಖಡರುಗಳು ತೆರಳುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಅಭೂತಪೂರ್ವ ಸ್ವಾಗತ ಸಿಗುತ್ತಿದೆ.ಮಂಡ್ಯ ಸೇರಿದಂತೆ ಎರಡ್ಮೂರು ಕಡೆಗಳಲ್ಲಿ ನಮಗೆ ಹಿನ್ನಡೆ ಇದ್ದರೂ ಸಹ. ಅಲ್ಲಿಯೂ ನಾವು ನಮ್ಮ ಅಭ್ಯರ್ಥಿ ಗೆಲವು ಸಾಧಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಬಿಜೆಪಿ ಹಾಕಿದ 20 ಕ್ಷೇತ್ರದ ಅಭ್ಯರ್ಥಿಗಳ ಪೈಕಿ 15 ಸ್ಥಾನಗಳಲ್ಲಿ ಗೆಲವು ಸಾಧಿಸಿ ವಿಧಾನ ಪರಿಷತ್ತಿನಲ್ಲಿ ಹಿಡಿತ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಅಭ್ಯರ್ಥಿಯಾಗಿರುವ ಮಹಾಂತೇಶ ಕವಟಗಿಮಠ ‌ಅವರು ಕಳೆದ ಎರಡೂ ಬಾರಿ ವಿಧಾನ ಪರಿಷತ್ ನಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವುದರ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ.

ಗ್ರಾಪಂ, ತಾಪಂ, ಜಿಪಂ, ಪುರಸಭೆ, ನಗರ ಸಭೆ ಮಹಾನಗರ ಪಾಲಿಕೆ ಎಲ್ಲ ಸದಸ್ಯರು ಸಹ ಒಗ್ಗಟ್ಟಿನಿಂದ ಕವಟಗಿಮಠ ಅವರಿಗೆ ಮತ ಹಾಕಬೇಕೆಂದು ಮನವಿ ಮಾಡುತ್ತೇನೆ.

ಪಕ್ಷೇತರ ಅಭ್ಯರ್ಥಿಯಾಗಿ ಲಖನ್ ಜಾರಕಿಹೊಳಿ ಸ್ಪರ್ಧೆ ವಿಚಾರಕ್ಕೆ ಉತ್ತರಿಸಿದ ಅವರು, ಈ ಬಗ್ಗೆ ನಾನು ಅವರು ಜತೆಗೆ ಚರ್ಚೆ ಮಾತನಾಡುತ್ತೇನೆ.ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕವಟಗಿಮಠ ಗೆಲ್ಲುಸುತ್ತೇವೆ ಎಂದರು.

ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡರ, ಮಹಾಂತೇಶ ‌ಕವಟಗಿಮಠ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.