Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜಿಲ್ಲೆಯ ಸುರೀದ ಮಳೆಗೆ 5,567 ಹೆಕ್ಟರ್ ಭತ್ತ ಹಾನಿಯಾಗಿದೆ: ಡಿಸಿ

localview news

ಬೆಳಗಾವಿ:ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದುವಾರದಲ್ಲಿ ಜಾಸ್ತಿ ಮಳೆ ಬಂದಿದೆ. ವಾಡಿಕೆಗಿಂತ 230 ಶೇ. ಹೆಚ್ಚು ಮಳೆ ಜಿಲ್ಲೆಯಲ್ಲಿ ಆಗಿದ್ದು, ಇದರಿಂದ ಬೆಳಗಾವಿ ಹಾಗೂ ಖಾನಾಪುರ ತಾಲೂಕಿನಲ್ಲಿ ಭತ್ತದ ಬೆಳೆ ಹಾನಿಯಾಗಿದೆ. 5,567 ಹೆಕ್ಟರ್ ಪ್ರದೇಶದಲ್ಲಿ ಭತ್ತ ಹಾನಿಯಾಗಿರುವುದು ಪ್ರಾಥಮಿಕ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರಕಾರದ ಮುಹೆಚ್ಚಿನ ತನಿಖೆ ನಡೆಸಲು ಜಂಟಿಯಾಗಿ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಜಂಟಿ ಸರ್ವೇ ನಡೆಸಿದ್ದಾರೆ. ಮೂರು ದಿನದಲ್ಲಿ ಈ ಸರ್ವೇ ಕಾರ್ಯ ಮುಗಿದು ಮಾಹಿತಿ ಕೊಡಬೇಕೆಂದು ಹೇಳಿದ್ದೇವೆ ಎಂದರು.

ತೋಟಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆ ನಾಶವಾಗಿದೆ ಎಂದು ಪ್ರಾಥಮಿಕ ವರದಿ ಬಂದಿದೆ. ಅದಕ್ಕೂ ಕೂಡ ಜಂಟಿ ಸಮೀಕ್ಷೆ ನಡೆಸಿ ವರದಿ ಬಂದ ಬಳಿಕ ಸರಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಲಾಗುವುದು ಎಂದ ಅವರು, ಮನೆ ಹಾನಿಯ ಬಗ್ಗೆ 32 ಮನೆಗಳ ಹಾನಿಯಾಗಿವೆ.

ಸ್ಥಳೀಯ ಸಂಘ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯಲ್ಲಿ 239 ಮನೆಗಳು ಭಾಗಃಶ ಬಿದ್ದಿದ್ದು, ವರದಿಯಾಗಿವೆ. ಇದರಲ್ಲಿಯೂ ಕೂಡ ಪೂರ್ಣ ಪ್ರಮಾಣದ ಮನೆ ಬಿದ್ದವರಿಗೆ ಸರಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಭಾಗಃಶ ಬಿದ್ದ ಮನೆಗಳಿಗೆ ಪೂರ್ತಿ ಮನೆ ಕಟ್ಟಿಕೊಳ್ಳುವುದಿದ್ದರೇ 5 ಲಕ್ಷ ರೂ. ಮನೆ ದುರಸ್ಥಿ ಮಾಡಿಸಿಕೊಳ್ಳುತ್ತಿದ್ದರೇ 3 ಲಕ್ಷ ರೂ.ಗಳನ್ನು ಪರಿಹಾರ ನೀಡುತ್ತೇವೆ. 25 ಪ್ರತಿಶತ ಮನೆ ಬಿದ್ದಿದ್ದರೇ 50 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. 25 ರಿಂದ 70 ಪ್ರತಿಶತ ಮನೆ ಹಾನಿಯಾಗಿದ್ದರೇ 1 ಲಕ್ಷ ರೂ. ಪರಿಹಾರ ನೀಡಲಾಗುವದು ಎಂದರು.