ಚಾಲೆಂಜ್ ಇರೋದು ಬಿಜೆಪಿಗೆ ನಮಗಲ್ಲ: ಶಾಸಕ ಸತೀಶ
ಬೆಳಗಾವಿ :ಪಕ್ಷಾಧಾರದ ಮೇಲೆ ಚುನಾವಣೆ ನಡೆಯುತ್ತದೆ. ಕುಟುಂಬಾಧರಿತ ನಡೆಯುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ನಾಮಪತ್ರ ಸಲ್ಲಿಕೆಯ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು
ನಮಗೆ ಮೊದಲು ಪಕ್ಷ ಮುಖ್ಯ. ಪ್ರತಿ ಚುನಾವಣೆಯಲ್ಲಿಯೂ ಸಹೋದರರ ಸವಾಲ್ ಇದ್ದೆ ಇರುತ್ತದೆ. ಅಲ್ಲಿ ರಮೇಶ ಜಾರಕಿಹೊಳಿ ಇದ್ದರೇ, ಇಲ್ಲಿ ಸತೀಶ ಜಾರಕಿಹೊಳಿ ಇದ್ದಾರೆ ಎಂದರು. ರಾಜಕೀಯದಲ್ಲಿ ಸೋಲು, ಗೆಲವು ಹಾಗೂ ಸವಾಲುಗಳು ನಿಶ್ಚಿತ. ರಮೇಶ ಜಾರಕಿಹೊಳಿ ಯಾವಲೂ ಸಿರಿಯಸ್ ಇರುತ್ತಾರೆ.
ನಾವು ಅವರು ಎಂದಿಗೂ ಕೂಲ್ ಇರುವುದು ನೋಡಿಲ್ಲ ಎಂದ ಅವರು, ಚಾಲೆಂಜ್ ಇರುವುದು ಬಿಜೆಪಿಗೆ ನಮಗಲ್ಲ. ನಮಗೆ ಒಂದೇ ಅಭ್ಯರ್ಥಿ ಒಂದೇ ಮತ ಚುನಾವಣೆ ಪಕ್ಷದ ಮೇಲೆ ನಡೆಯುತ್ತದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸುವುದು ನಿಶ್ಚಿತ ಎಂದರು. ಲಖನ್ ಜಾರಕಿಹೊಳಿಗೆ ರಮೇಶ ಜಾರಕಿಹೊಳಿ ಅವರು ಮೊದಲು ದುಡ್ಡು ಕೊಟ್ಟು ಸೋಲಿಸಿದ್ದಾರೆ. ಆ ನೋವು ನಮಗೂ ಇದೆ ನಮ್ಮ ಕಾರ್ಯಕರ್ತರುಗೂ ಇದೆ. ಅದನ್ನು ಎಂದಿಗೂ ಮರೆಯುವುದಿಲ್ಲ.
ನಾಮಪತ್ರ ಸಲ್ಲಿಸಿದರೂ ಬಿಜೆಪಿಯವರು ಒಳ್ಳೆಯ ಸ್ಥಾನ ಮಾನ ನೀಡುತ್ತೇವೆ ಎಂದರೆ ಹಿಂಪಡೆಯಬಹುದು. ಅವರ ಪಕ್ಷ ಬೇರೆ ನಮ್ಮ ಪಕ್ಷ ಬೇರೆ. ವಿಧಾನ ಪರಿಷತ್ ಚುನಾವಣೆ ಅರ್ಧದಷ್ಟು ಪ್ರಚಾರ ಮಾಡಲಾಗಿದೆ.
ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರಿಗೆಯೇ ಮೊದಲ ಪ್ರಾಶಸ್ತ್ಯ ಮತದಿಂದ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.