ಖಾಸಗಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಮುಂದಾದ ಭಾರತ್ ಸರ್ಕಾರ
ದೆಹಲಿ :ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ 26 ಹೊಸ ಮಸೂದೆಗಳನ್ನು ಪರಿಚಯಿಸಲು ಪಟ್ಟಿಮಾಡಲಾಗಿದೆ ಈ ಅಧಿವೇಷನ್ ನವೆಂಬರ್ 29 ರಿಂದ ಪ್ರಾರಂಭವಾಗಿ ಡಿಸೆಂಬರ್ 23 ರಂದು ಮುಕ್ತಾಯಗೊಳ್ಳಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮೂಲಕ ನೀಡಲಾಗುವ ಅಧಿಕೃತ ಡಿಜಿಟಲ್ ಕರೆನ್ಸಿಯ ಚೌಕಟ್ಟನ್ನು ರಚಿಸಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಗುರಿಯನ್ನು ಮಸೂದೆ ಮಂಡಿಸಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಪ್ಟೋಕರೆನ್ಸಿಗಳ ಬಗ್ಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಅತಿಯಾದ ಭರವಸೆ ಮತ್ತು ಪಾರದರ್ಶಕವಲ್ಲದ ಜಾಹೀರಾತಿನ ಮೂಲಕ ಯುವಕರನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಅದನ್ನು ನಿಲ್ಲಿಸಬೇಕು ಎಂದು ಹೇಳಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಭಾರತದಲ್ಲಿ ಕ್ರಿಪ್ಟೋಕರೆನ್ಸಿ ಹೂಡಿಕೆಯ ಬಗ್ಗೆ ಕೇಂದ್ರೀಯ ಬ್ಯಾಂಕ್ನ ಕಳವಳವನ್ನು ಪುನರುಚ್ಚರಿಸಿದ್ದರು.
ಕ್ರಿಪ್ಟೋಕರೆನ್ಸಿಗಳನ್ನು ಅನುಮತಿಸುವುದರ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಪುನರುಚ್ಚರಿಸಿದ ಆರ್ ಬಿಐ ಗವರ್ನರ್ ಕ್ರಿಪ್ಟೋ ಕರೆನ್ಸಿಗಳು ಹಣಕಾಸು ವ್ಯವಸ್ಥೆಗೆ ಗಂಭೀರ ಅಪಾಯವಾಗಿವೆ ಎಂದು ಹೇಳಿದರು.