ಸಾಧಕ, ಬಾಧಕ ಚರ್ಚಿಸದೇ ನೂತನ ಶಿಕ್ಷಣ ನೀತಿ ಜಾರಿ: ಕೀರ್ತಿ ಗಣೇಶ
ಬೆಳಗಾವಿ: ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ ನೇತೃತ್ವದಲ್ಲಿ ಇಲ್ಲಿನ ಭರತೇಶ ಮಹಾವಿದ್ಯಾಲಯದಲ್ಲಿ ಇಂದು ರಾಷ್ಟ್ರೀಯ ಶಿಕ್ಷಣ ನೀತಿ ಜಾಗೃತ ಕಾರ್ಯಕ್ರಮ ಜರುಗಿತು.
ಈ ವೇಳೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ಅವರು ಮಾತನಾಡಿ, ಸಾಧಕ, ಬಾಧಕಗಳನ್ನು ಚರ್ಚಿಸದೇ, ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ತರಾತುರಿಯಲ್ಲಿ ಜಾರಿಗೆ ತಂದಿದೆ. ಇದರಲ್ಲಿ ಬಡವಿದ್ಯಾರ್ಥಿಗಳ ಸ್ಥಿತಿಯನ್ನು ಸರ್ಕಾರ ಅರಿಬೇಕಿತ್ತು ಎಂದರು.
ನೂತನ ಶಿಕ್ಷಣ ನೀತಿ ಜಾರಿಗೆ ತರುವ ಮುನ್ನ ವಿದ್ಯಾರ್ಥಿಗಳ ಒಪ್ಪಿಗೆ ಪಡೆದುಕೊಳ್ಳಬೇಕಿತ್ತು. ಅದರಲ್ಲಿ , ಸ್ವಲ್ಪ ಬದಲಾವಣೆ ಮಾಡಿದರೆ ಒಳಿತು ಎಂದು ಅಸಮಾದಾನ ಹೋರಹಾಕಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯದರ್ಶಿ ಗಳಾದ ರಫೀಕ್ ಅಲಿ , ಭರತ್ ಗೌಡ, ಸಂಗನಗೌಡ ಪಾಟೀಲ್, ಮಾಹಿತಿ, ತಂತ್ರಜ್ಞಾನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಮೀರ್ ಬಾಗವಾನ್ , ಅಪ್ತಾಬ್ ಕಮತನೂರ, ಪ್ರವೀಣ ಮನ್ನೂಕರ್ ಹಾಗೂ ಎನ್ ಎಸ್ ಯು ಐ ಕಾರ್ಯಕರ್ತರು ಇತರರು ಇದ್ದರು.