Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ: ಡಿಕೆಶಿ

localview news

ಬೆಳಗಾವಿ:ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ. ಮಳೆಯ ಹವಾಮಾನವೂ ಉತ್ತಮವಾಗಿದೆ. ಕಾಂಗ್ರೆಸ್ ಪರ ಉತ್ತಮ ಫಸಲು ಸಿಗುವ ಸಾಧ್ಯತೆ ಇದ್ದು, ರಾಜ್ಯದ ಜನರು ಬದಲಾವಣೆ ಬಯಸಿದ್ದಾರೆ. ಕಳೆದ ಬಾರಿಯ ಚುನಾವಣೆಗಿಂತ ಹೆಚ್ಚಿನ ಸ್ಥಾನ ಗೆಲವು ಸಾಧಿಸುವ ವಿಶ್ವಾಸ ಇದೆ ಎಂದು ಕೆಪಿಸಿಸಿ‌ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಅವರು ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಗ್ರಾಪಂ, ಜಿಪಂ, ಮಹಾನಗರ ಪಾಲಿಕೆ ಸದಸ್ಯರು ಮಾತ್ರ ಮತ ಚಲಾವಣೆ ಮಾಡುತ್ತಾರೆ. ಗ್ರಾಪಂಗೆ ಹೆಚ್ಚಿನ ಅನುದಾನ ನೀಡಿದ್ದು ಕಾಂಗ್ರೆಸ್. ಜೆ.ಎಚ್.ಪಟೇಲ್ ರ ಕಾಲದಲ್ಲಿ ಗ್ರಾಪಂಗೆ ಒಂದು ಲಕ್ಷ ಅನುದಾನ ಇತ್ತು. ಅದನ್ನು ಎಸ್. ಎಂ.ಕೃಷ್ಣಾ ಅವರು ಐದು ಲಕ್ಷಕ್ಕೆ ಏರಿಸಿ ಅಭಿವೃದ್ಧಿ ಪಡಿಸಿದ್ದರು. ಅಲ್ಲದೆ ಕೆಲವು ಇಲಾಖೆಯನ್ನು ಸೇರಿಸಿ ಗ್ರಾಪಂಗೆ ಶಕ್ತಿ ನೀಡಿದ್ದೇವು. ಸೋನಿಯಾ ಗಾಂಧಿ ನೇತೃತ್ವದ ಮುಖಂಡತ್ವದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾದಗ ನರೇಗಾ ಯೋಜನೆ ಜಾರಿಗೆ ತಂದರು. ಒಂದು ಪಂಚಾಯತಿಗೆ ಎರಡ್ಮೂರು ಕೋಟಿ ಅನುದಾನ ಬರಲು ಕಾಂಗ್ರೆಸ್ ಕೊಡುಗೆ ಅಪಾರವಾಗಿದೆ. ಗ್ರಾಪಂ ಸದಸ್ಯರು ಬುದ್ದಿವಂತರು, ಬುದ್ಧಿವಂತರಿದ್ದಾರೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರದಿಂದ ಏನೂ ಉಪಯೋಗ ಆಗಿಲ್ಲ ಆದ್ದರಿಂದ ಯೋಗ್ಯ ಅಭ್ಯರ್ಥಿ ಕಾಂಗ್ರೆಸ್ ಗೆ ಮತ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಆರೋಪ‌ ಮಾಡುತ್ತಿರುವ ಬಿಜೆಪಿಗೆ ಪ್ರತ್ಯುತ್ತರ ನೀಡಿದ ಡಿ.ಕೆ.ಶಿವಕುಮಾರ್, ಯಡಿಯೂರಪ್ಪನವರು ಜೆಡಿಎಸ್ ಬೆಂಬಲ ಕೇಳಿದ್ದಾರೆ‌. ಸಿಎಂ ಬಸವರಾಜ ಬೊಮ್ಮಾಯಿ‌ ಕೇಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಜೆಡಿಎಸ್ ನವರು ಏನಾದರೂ ಮಾಡಿಕೊಳ್ಳಲಿ. ಅರುಣ್ ಸಿಂಗ್ ಹೇಳಿಕೆ ನೀಡಿದ ಮೇಲೂ ಯಡಿಯೂರಪ್ಪನವರು ಜೆಡಿಎಸ್ ಬೆಂಬಲ ಕೇಳುತ್ತಿದ್ದಾರೆ. ಹಾಗಾದರೆ ಯಾವುದು ಮುಳುಗುವ ಹಡುಗು ಅವರು ಬಲಿಷ್ಠವಾಗಿದ್ದರೆ ಯಾಕೆ ಬೆಂಬಲ ಕೊಡಬೇಕು