Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚನ್ನರಾಜ ಗೆಲುವಿಗೆ ಶ್ರಮಿಸೋಣ: ಡಿ.ಕೆ. ಶಿವಕುಮಾರ್

localview news

ಬೆಳಗಾವಿ:" ಎಲ್ಲಾ ಕಾಂಗ್ರೆಸ್ ಮುಖಂಡರ ಒಮ್ಮತದಿಂದ ಚನ್ನರಾಜ ಹಟ್ಟಿಹೊಳಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಅವರ ಗೆಲುವಿಗೆ ಶ್ರಮಿಸೋಣ " ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವಿಧಾನ ಪರಿಷತ್ ಚುನಾವಣೆಯ ಪ್ರಚಾರಾರ್ಥವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಣದ ಆಮಿಷಕ್ಕೆ ಬಲಿಯಾಗಿ ಗ್ರಾಪಂ ಸದಸ್ಯರು, ವಿರೋಧಿ ಅಭ್ಯರ್ಥಿಗಳಿಗೆ ಮತ ಹಾಕುವುದನ್ನು ತಡೆಯಲು ವಿಶೇಷ ಜಾಗೃತದಳ ರಚಿಸುವುದಾಗಿ ಹೇಳಿದರು.

ಚುನಾವಣಾ ವೇಳೆ ಪಕ್ಷದ ಸದಸ್ಯರ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇಡಲು, ಎರಡು ಗ್ರಾಮ ಪಂಚಾಯತಿಗೆ ಒಂದರಂತೆ ಪಕ್ಷದಲ್ಲಿಯೇ ಒಂದು ಜಾಗೃತ ಸಮಿತಿ ರಚಿಸಲಾಗುವುದು. ಇದಷ್ಟೇ ಅಲ್ಲ, ವಿರೋಧಿ ಬಣದಲ್ಲಿಯೂ ಕೆಲವು ಜಾಗೃತ ಸಮಿತಿ ಸದಸ್ಯರನ್ನು ಸೇರಿಸಿ, ಅಲ್ಲಿನಿಂದಲೇ ನಮ್ಮ ಸದಸ್ಯರ ಚಲನ-ವಲನಗಳ ಮೇಲೆ ನಿಗಾ ಇಡಲಾಗುವುದು. ಪಕ್ಷವಿರೋಧಿ ಚಟುವಟಿಕೆಯ ಸೂಚನೆ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ್ದೇ ಆದ 4 ಸಾವಿರಕ್ಕೂ ಹೆಚ್ಚು ಮತಗಳಿದ್ದು, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಷ್ಟು ಮತಗಳು ಸಾಕು. “ನಮಗೆ ಹೊರಗಿನ ಮತಗಳು ಬೇಡ. ನಮ್ಮ ಪಕ್ಷದ್ದೇ ಮತಗಳು ಬಿದ್ದರೆ ಸಾಕು. ನಮ್ಮ ಮತಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಪಕ್ಷದ ಎಲ್ಲ ಕಾರ್ಯಕರ್ತರ ಮೇಲಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಮಾಹಾತೇಂಶ ಕೌಜಲಗಿ, ಎನ್ಎ ಹ್ಯಾರೀಸ್, ಲಕ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಎ.ಎನ್. ಹ್ಯಾರಿಶ್, ಮಾಜಿ ಸಚಿವ ವೀರಕುಮಾರ್ ಪಾಟೀಲ್ , ಡಿಬಿ ಇನಾಮರಾದ್ ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ್ , ಪೀರೋಜ್ ಸೇಠ , ಶಾಹಾಜಾನ್ ಡೋಂಗರಗಾವ್ ಎಐಸಿಸಿ ಕಾರ್ಯದರ್ಶಿ ಐವಾನ್ ಡಿಸೋಜಾ, ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ವಿಶ್ವಾಸ ವೈದ್ಯ, ಅರವಿಂದ ದಳವಾಯಿ, ಗಜಾನನ ಮಂಗಸೂಳಿ, ಎಸ್ .ಬಿ.ಘಾಟಗೆ, ಮಹಾವೀರ ಮೋಹಿತೆ, ರಾಜು ಸೇಠ, ವಿನಯ ನಾವಲಗಟ್ಟಿ, ಲಕ್ಷಣರಾವ್ ಚಿಂಗಳೆ ಹಾಗೂ ಇತರರು ಇದ್ದರು.