Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದಕ್ಷಿಣ ಕ್ಷೇತ್ರದ ನೋಂದ ಜನರಿಗೆ ಬೆಳಕಾದ ಯುವ ಮುಖಂಡ ರಾಹುಲ್

localview news

ಬೆಳಗಾವಿ: ಸಾಲದ ಬಾದೆ ತಾಳಲಾದರೆ ಆತ್ಮಹತ್ಯೆಗೆ ಶರಣಾದ  ದಕ್ಷಿಣ ಮತಕ್ಷೇತ್ರದ ವಡಗಾಂವ ನೇಕಾರ  ಸಮಾಜದ ನಾಲ್ವರು ಮೃತ ಕುಟುಂಬಸ್ಥರ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ, ಮೃತಪಟ್ಟ ಕುಟುಂಬಕ್ಕೆ ಸ್ವಾಂತನ ಹೇಳಿದರಲ್ಲದೆ, ಶಾಶ್ವತ ಪರಿಹಾರ ಕೊಡಿಸುವ ಭರವಸೆ ನೀಡಿದರು. ನೊಂದ ಕುಟುಂಬಸ್ಥರಿಗೆ ಧೈರ್ಯ ತುಂಬುವ ಮೂಲಕ,  ಸೌಲಭ್ಯ ಹಾಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಈ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ ಮೇರಿಗೆ  ನೇಕಾರ  ಸಮಾಜ ನಾಲ್ವರು ಮೃತ ಕುಟುಂಬಸ್ಥರ ಮನೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಇಂದು( ಸೋಮವಾರ) ಭೇಟಿ ನೀಡಿ, ಪರಿಹಾರ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿಸಿದ್ದಾರೆ. ನೇಕಾರ  ಸಮಾಜದ  ಪಾಂಡುರಂಗ ಉಪ್ಪರಿ, ಗಣಪತ ಭುಚಡಿ,  ಗಣಪತ ಸಂಗನ್ನವರ, ಗಣಪತ ಭಂಡಾರಿ ಕುಟುಂಬಸ್ಥರಿಗೆ ಪರಿಹಾರ ನೀಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂ ಜಿ,   ಮಲ್ಲಗೌಡ ಪಾಟೀಲ್ ,ಪರಶುರಾಮ್ ಡಗೆ, ನಗರ ಸೇವಕ ರಘು ಡೋಕರೆ,  ಜ್ಯೋತಿಭಾ ಗುಟ್ಟೆನ್ನವರ ಹಾಗೂ  ಇತರರು ಇದ್ದರು.