ಟ್ವಿಟ್ಟರ್ ಜಗತ್ತಿಗೆ ಹೊಸ ಸಿಇಓ ಆದ IIT ವಿದ್ಯಾರ್ಥಿ
ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಐಬಿಎಂ, ಪಾಲೊ ಆಲ್ಟೊ ನೆಟ್ವರ್ಕ್ಗಳು ಮತ್ತು ಈಗ ಟ್ವಿಟರನ್ನು ಕೂಡಾ ಭಾರತದವರೇ ಕೈಗೆತ್ತಿಕೊಂಡಿದ್ದಾರೆ, ತಂತ್ರಜ್ಞಾನ ಜಗತ್ತಿನಲ್ಲಿ ಭಾರತೀಯರ ಅದ್ಭುತ ಯಶಸ್ಸನ್ನು ಇಡಿ ವಿಶ್ವ ಹಾಡಿ ಹೊಗಳುವಂತಾಗಿದೆ.
37 ವರ್ಷದ ಪರಾಗ್ ಅಗರವಾಲ್, CTO ಆಗಿ ನಾಲ್ಕು ವರ್ಷಗಳ ಅವಧಿಯ ನಂತರ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆಯ ನಂತರ ಟ್ವಿಟ್ಟರನ ಸಿಇಓಆಗಿ ನೇಮಕಗೊಂಡಿದ್ದಾರೆ.
ಟ್ವಿಟ್ಟರನ ಹೊಸ CEO ಆಗಿ ನೇಮಕಗೊಂಡ ನಮ್ಮ ಹಳೆಯ ವಿದ್ಯಾರ್ಥಿ ಡಾ. ಪರಾಗ್ ಅಗರವಾಲ್ ಅವರಿಗೆ ಅಭಿನಂದನೆಗಳು. 2005 ರಲ್ಲಿ IIT ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಪದವಿ ಪಡೆದ ಅವರು 2011 ರಲ್ಲಿ Twitter ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು 2017 ರಲ್ಲಿ CTO ಆದರು ಎಂದು ITT ಬಾಂಬೆ ಟ್ವಿಟ್ ಮೂಲಕ ಅಭಿನಂದನೆಗಳನ್ನು ತಿಳಿಸಿದೆ.
Congratulations to our alumnus Dr. Parag Agrawal for being appointed the new CEO of Twitter. Dr. Agrawal obtained his https://t.co/KI2VMHsUbi. degree in Computer Science and Engineering from IIT Bombay in 2005. He started working at Twitter in 2011 & became the CTO in 2017.#iitb pic.twitter.com/A0yt37pfUR
— IIT Bombay (@iitbombay) November 30, 2021
ಭಾರತೀಯ ಪ್ರತಿಭೆಗಳಿಂದ USA ಹೆಚ್ಚು ಪ್ರಯೋಜನ ಪಡೆಯುತ್ತದೆ... ಎಂದು ಸ್ಪೆಷಎಕ್ಷ್ ಸಿಇಓ ಏಲೋನ್ ಮಸ್ಕ್ ಭಾರತೀಯ ಪ್ರತಿಬೆಗಳನ್ನು ಹೊಗಳಿದ್ದಾರೆ.