Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚನ್ನರಾಜ ಹಟ್ಟಿಹೊಳಿಗೆ ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲ್ಲಿಸಿ: ಶಾಸಕ ಸತೀಶ ಕರೆ

localview news

ಯಮಕನಮರಡಿ: " ಜಿಲ್ಲೆಯ ವಿಧಾನ ಪರಿಷತ್ ಗೆ ಇದೇ ಡಿ. 10 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ, ಬಹು ಅಂತರದಿಂದ ಗೆಲ್ಲಿಸಬೇಕು. ಈ ಗೆಲುವಿನಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರವಾಗಲಿದೆ ಎಂದು " ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.

ಕ್ಷೇತ್ರದ ಅಭಿವೃದ್ಧಿಗೆ ಬಲ: ಹೆಬ್ಬಾಳ ಜಿಲ್ಲಾ ಪಂಚಾಯತ ಯಾವುದೇ ಸ್ಥಳೀಯ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆ ನಡೆದರೂ, ನಮ್ಮನ್ನು ಬೆಂಬಲಿಸಿ ಹೆಚ್ಚಿನ ಮತಗಳನ್ನು ನೀಡಿ ಸಹಕಾರ ನೀಡಿದ್ದೀರಿ.

ಈ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ. ಹಾಗಾಗಿ ಗ್ರಾಪಂ ಚುನಾಯಿತ ಪ್ರತಿನಿಧಿಗಳ ಮೇಲೆ ಬಾಹಳಷ್ಟು ಜವಾಬ್ದಾರಿ ಇದೆ. ಅದಕ್ಕಾಗಿ ಸದಸ್ಯರು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದರು. ಯಮಕನಮರಡಿ ವಿಧಾನಸಭಾ ಮತಕ್ಷೇತ್ರ ಹಾಗೂ ಹೆಬ್ಬಾಳ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿಯವರನ್ನು ಬಹು ಅಂತರದಿಂದ ಗೆಲ್ಲಿಸುವ ಮೂಲಕ, ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಲಾಗುವುದು. ಚುನಾವಣೆ ಇರೋದರಿಂದ ಬೇರೆ-ಬೇರೆ ಪಕ್ಷದವರು ಆಸೆ -ಆಮಿಷ ಒಡ್ಡುವ ಯತ್ನ ಮಾಡುತ್ತಿದ್ದಾರೆ.

ಅಂತವರ ಮಾತುಗಳಿಗೆ ಮಾರುಹೋಗದೇ ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಬೇಕು. ಈ ಗೆಲುವು ಮುಂಬರುವ ವಿಧಾನಸಭೆಯ ಚುನಾವಣೆಯ ದಿಕ್ಸೂಚಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈರಣ್ಣ ಬಿಸಿರೋಟ್ಟಿ, ಪಪ್ಪುಗೌಡ ಪಾಟೀಲ್ , ಕುಶಾಲ್ ಖೋತ, ಮಹಾತೇಂಶ ಮಗದುಮ್ಮ , ಇಲಿಯಾಸ್ ಇನಾಮಾದಾರ್ , ಆನಂದ ತವಗಮಠ, ಸುದೀರ ಗಿರಿಗೌಡರ, ಸುರೇಶ ಹುದ್ದಾರ, ನಿಂಗನಗೌಡ ಪಾಟೀಲ್ , ರಾಜು ಅವಠೆ, ಕಿರಣ ರಜಪೂತ್ ಹಾಗೂ ಇತರರು ಇದ್ದರು.