Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪೆಟ್ರೋಲ್ ಬೆಲೆ ಮತ್ತಷ್ಟು ಅಗ್ಗಗೊಳಿಸಿದ ಕೇಜ್ರಿವಾಲ್ ಸರ್ಕಾರ

localview news

ದೆಹಲಿ:ಕೇಂದ್ರ ಸರ್ಕಾರ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿತ್ತು, ನಂತರ ರಾಜ್ಯ ಸರ್ಕಾರಗಳು ತಮ್ಮ ಮಟ್ಟದಲ್ಲಿ ವ್ಯಾಟ್ ಬೆಲೆಗಳನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕರಿಗೆ ಪರಿಹಾರ ನೀಡಬೇಕೆಂದು ಒತ್ತಡ ಹೇರಲಾಗಿತ್ತು.

ರಾಜಧಾನಿಯ ಜನತೆಗೆ ಬಿಗ್ ರಿಲೀಫ್ ನೀಡಿದ ದೆಹಲಿ ಸರ್ಕಾರ ಪೆಟ್ರೋಲ್ ಬೆಲೆಯನ್ನು ರೂ.8 ರಷ್ಟು ಇಂದು ನಡೆದ ಸಂಪುಟ ಸಭೆಯ ಬಳಿಕ ದೆಹಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇಂದು ನಾವು ದೆಹಲಿಯಲ್ಲಿ ಪೆಟ್ರೋಲ್ ಅನ್ನು ಅತ್ಯಂತ ಅಗ್ಗವಾಗಿಸಿದ್ದೇವೆ ವ್ಯಾಟ್ ದರವನ್ನು 30% ರಿಂದ 19.4% ಕ್ಕೆ ಇಳಿಸಲಾಗಿದೆ. ಎನ್‌ಸಿಆರ್‌ನ ಇತರ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಿದೆ.
ಈ ಕ್ರಮವು ಹಣದುಬ್ಬರದಿಂದ ದೆಹಲಿಯ ಜನರಿಗೆ ಪರಿಹಾರವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಕೇಜ್ರಿವಾಲ್ ಟ್ವಿಟ್ ಮೂಲಕ ತಿಳಿಸಿದ್ದಾರೆ.