Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಥಣಿ ಜಿಲ್ಲೆಯನ್ನಾಗಿಸಿ ಎಂದು ಸಿ.ಎಂ ಅವರಿಗೆ 7000 ಪತ್ರ ರವಾನೆ.

localview news

ಅಥಣಿ : ರಾಜಕೀಯ ಹಿತಾಸಕ್ತಿಯ ಕೊರತೆಯಿಂದ ಅಥಣಿ ಜಿಲ್ಲೆಯಾಗುವ ಅರ್ಹತೆ ಇದ್ದರೂ ಕೂಡ ಇದುವರೆಗೂ ತಾಲೂಕಾಗಿ ಉಳಿದಿರುವುದು ವಿಷಾಧನೀಯ ಹಾಗಾಗಿ ಇವತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ತಾಲೂಕಿನಿಂದ ಸುಮಾರು 7000 ಪತ್ರಗಳನ್ನು ಕಳುಹಿಸಿ ಅಥಣಿಯನ್ನು ಜಿಲ್ಲೆಯನ್ನಾಗಿಸಿ ಎಂದು ಶೆಟ್ಟರಮಠದ ಶ್ರೀ ಮರುಳಸಿದ್ದ ಮಹಾಸ್ವಾಮಿಗಳು ಸರಕಾರವನ್ನು ಒತ್ತಾಯಿಸಿದರು.

ಅವರು ಸ್ಥಳೀಯ ಶೆಟ್ಟರಮಠದ ಆವರಣದಲ್ಲಿ ಅಥಣಿ ಜಿಲ್ಲಾ ಹೋರಾಟ ಸಮೀತಿ ವತಿಯಿಂದ ಹಮ್ಮಿಕೊಂಡ ಪತ್ರಿಕಾಘೋಷ್ಠಿಯಲ್ಲಿ ಮಾತನಾಡುತ್ತಾ ನಮ್ಮ ಚುಣಾಯಿತ ಜನಪ್ರತಿನಿಧಿಗಳು ಹಾಗೂ ಸಮಸ್ತ ಅಥಣಿ ಜನತೆ ಅಥಣಿಯನ್ನು ಜಿಲ್ಲೆಯನ್ನಾಗಿಸುವ ವಿಷಯದಲ್ಲಿ ಏಕೆ ಮೌನವಾಗಿದ್ದಾರೆಂದು ತಿಳಿಯುತ್ತಿಲ್ಲ, ಕೂಡಲೇ ಸಮಸ್ತ ಜನತೆ ಹಾಗೂ ಚುಣಾಯಿತ ಪ್ರತಿನಿಧಿಗಳು ಕೈಜೋಡಿಸಿ ಉತ್ಸಾಹದಿಂದ ಜಿಲ್ಲೆಯನ್ನಾಗಿಸುವ ಕಾಯಕದಲ್ಲಿ ತೊಡಗಿಕೊಳ್ಳೋಣ ಎಂದರು.

ಅಥಣಿ ಜಿಲ್ಲೆಯಾದರೆ ಗಡಿ ಭಾಗದಲ್ಲಿ ಕನ್ನಡದ ಭದ್ರ ಕೋಟೆಯಾಗುತ್ತದೆ, ನಮ್ಮ ಭಾಗದ ಬಡಜನತೆ ಶಿಕ್ಷಣಕ್ಕಾಗಿ, ವೈದ್ಯಕೀಯಕ್ಕಾಗಿ, ಕೆಲಸಕ್ಕಾಗಿ ಇತರ ಕಡೆಗೆ ವಲಸೆ ಹೋಗುವುದನ್ನು ತಡೆಯಲುಬಹುದು ಅದಕ್ಕಾಗಿ ಅಥಣಿ ಜಿಲ್ಲೆಯಾಗಬೇಕು ಎಂದು ಹೋರಾಟ ಸಮೀತಿ ಅಧ್ಯಕ್ಷ ಪ್ರಶಾಂತ ತೋಡಕರ ಅವರು ಹೇಳಿದರು.

ಅನಂತರ ಮಾತನಾಡಿದ ಹಿರಿಯ ಮುಖಂಡ ಅರುಣ ಯಲಗುದ್ರಿ ಅವರು ಮಾತನಾಡುತ್ತಾ ಅಥಣಿ ತಾಲೂಕಿನ‌ ಪೂರ್ವ ಭಾಗದಿಂದ ಪಶ್ಚಿಮ ಭಾಗಕ್ಕೆ ಹೋಗಬೇಕಾದರೆ 151 ಕಿ.ಮೀ ದೂರವಿದೆ, ಅವಿಭಜಿತ ಅಥಣಿ ತಾಲೂಕು ಸುಮಾರು 2070.54 ಚ ಕಿ.ಮೀ ವ್ಯಾಪ್ತಿ ಹೊಂದಿ ಅತೀ ದೊಡ್ಡ ತಾಲೂಕಾಗಿದ್ದು ಬೆಂಗಳೂರು ಭಾಗದ ಜಿಲ್ಲೆಗಳು ಹೊಂದಿರುವಷ್ಟು ವ್ಯಾಪ್ತಿಯನ್ನು ಹೊಂದಿದೆ, ದಕ್ಷಿಣ ಭಾಗದವರು ನಮ್ಮ ಉತ್ತರ ಕರ್ನಾಟಕದ ಹಲವು ಭಾಗಗಳನ್ನು ದೂರ ಇಡುತ್ತಲೇ ಬಂದಿರುವುದರಿಂದ ನಾವು ಇನ್ನೂ ಅವರಿಗಿಂತ ಹಿಂದುಳಿದಿವೆ, ನಮ್ಮ ತಾಲೂಕಿನ ಕೊನೆಯ ಗ್ರಾಮ ಕೊಟ್ಟಲಗಿಯಿಂದ ಜಿಲ್ಲಾಸ್ಥಳ ಬೆಳಗಾವಿಗೆ ಹೋಗಬೇಕಾದರೆ ಸುಮಾರು 200 ಕಿ.ಮೀ ದೂರವಾಗುತ್ತದೆ, ಅಲ್ಲಿಗೆ ಹೋಗಿ ಏನಾದರೂ ಕೆಲಸ ಮಾಡಿಕೊಂಡು ಬರಬೇಕಾದರೆ ಪೂರ್ಣ ಒಂದು ದಿನ ಕಳೆದು ಹೋಗುತ್ತದೆ ಹೀಗಾದರೆ ಬಡವರ ಕಥೆ ಏನು? ಎಂದು ಪ್ರಶ್ನಿಸಿದರು.

ಅಥಣಿ ಭಾಗದ ಜನಪ್ರತಿನಿಧಿಗಳ ದಿವ್ಯಮೌನದಿಂದ ಅಥಣಿಯು ಜಿಲ್ಲೆಯಾಗುವ ಅರ್ಹತೆ ಹೊಂದಿದ್ದರೂ ಸಹ ಇದುವರೆಗೂ ಜಿಲ್ಲೆಯಾಗಿಲ್ಲ ಕೂಡಲೇ ಅಥಣಿಯನ್ನು ಕರ್ನಾಟಕದ 32ನೇಯ ಜಿಲ್ಲೆಯನ್ನಾಗಿಸಿ ಇದು ನಮ್ಮ ಹಕ್ಕೋತ್ತಾಯವಾಗಿದೆ ಎಂದು ದೇವೆಂದ್ರ ಬಿಸ್ವಾಗರ ಅವರು ಹೇಳಿದರು.

ಈ ವೇಳೆ ಮುಖಂಡರಾದ ಪುಟ್ಟು ಹಿರೇಮಠ, ವಿನಯಗೌಡ ಪಾಟೀಲ, ರವಿ ಬಡಕಂಬಿ, ಸಚಿನ ಅವಟಿ, ಗೋವಿಂದ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.