Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕವಟಗಿಮಠ ಪರ ಬಿರುಸಿನ ಪ್ರಚಾರ ನಡೆಸಿದ ಡಾ. ಕೋರೆ

localview news

ಬೆಳಗಾವಿ :ಪಂಚಾಯತ್ ರಾಜ್ಯಕ್ಕೆ ಬಹು ಮೌಲಿಕ ಕೊಡುಗೆ ನೀಡಿರುವ ಮಹಾಂತೇಶ ಕವಟಗಿಮಠ ಯುವ ಉತ್ಸಾಹಿ ನಾಯಕರಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ರೈತರ ಗಟ್ಟಿ ಧ್ವನಿಯಾಗಿರುವ ಅವರಿಗೆ ಮೊದಲ ಮತವನ್ನು ನೀಡಿ ಬಹುಮತದಿಂದ ಆಯ್ಕೆ ಮಾಡಬೇಕೆಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಯಾಗಿರುವ ಮಹಾಂತೇಶ ಕವಟಗಿಮಠ ಅವರ ಪರವಾಗಿ ರಾಯಬಾಗ ತಾಲೂಕಿನ ಬಾವನ ಸವದತ್ತಿ, ನಸಲಾಪೂರ, ನಂದಿಕುರ್ಲಿ, ಜಲಾಲಪೂರ, ದಿಗ್ಗೇವಾಡಿಗ್ರಾಮ ಪಂಚಾಯತಗಳಿಗೆ ಭೇಟಿ ನೀಡಿ ಮತಯಾಚಿಸಿದರು. ಮಹಾಂತೇಶ ಕವಟಗಿಮಠ ದಣಿವರಿಯದ ದುಡಿಮೆಗಾರ, ಅವರ ಕುಟುಂಬ ಈ ಭಾಗದಲ್ಲಿ ಅನೇಕ ಸಾಮಾಜಿಕ ಕೆಲಸ ಕಾರ್ಯಗಳನ್ನು ಬದ್ಧತೆಯಿಂದ ಮಾಡಿದ್ದಾರೆ.

ರೈತರ ಬದುಕಿನ ಆಶಾ ಕಿರಣವಾಗಿರುವ ಅವರು ಸದನದ ಒಳಹೊರಗೆ ಸಮಸ್ಯೆಗಳನ್ನು ಬೆಳಕಿಗೆ ತಂದು ಚರ್ಚಿಸಿದ್ದಾರೆ. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗ್ರಾಮ ಪಂಚಾಯತಗಳ ಹತ್ತು ಹಲವಾರು ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಇಂತಹ ಯುವ ನಾಯಕನಿಗೆ ನಿಮ್ಮ ಮೊದಲ  ಮತವನ್ನು ನೀಡಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಚಿದಾನಂದ ಕೋರೆ ಸಕ್ಕರೆಕಾರಖಾನೆ ಚೇರಮನ್ ಭರತ ಬನವಣೆ, ವೈಸ್ ಚೇರಮನ್ ಮಲ್ಲಿಕಾರ್ಜುನ ಕೋರೆ, ತಾತ್ಯಾಸಾಬ ಕಾಟೆ, ಮಲ್ಲಪ್ಪಾ ಮಹಿಷಾಳೆ, ರಾಮಚಂದ್ರ ನಿಶಾನದಾರ, ಮಹೇಶ ಬಾತೆ, ಅಮಿತಜಾಧವ್, ಶಿವೂ ನಾಯಕ ಗ್ರಾಮಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಬಹುಸಂಖ್ಯೆಯಲ್ಲಿಉಪಸ್ಥಿತರಿದ್ದರು.