ರಮೇಶಗೆ ಇಬ್ಬರನ್ನೂ ಗೆಲ್ಲಿಸಲು ಆಗಲ್ಲ: ಶಾಸಕ ಸತೀಶ
ಬೆಳಗಾವಿ : ರಮೇಶ ಜಾರಕಿಹೊಳಿಗೆ ಕಡೆಯಿಂದ ಎರಡೂ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಿಲ್ಲ. ಒಬ್ಬರನ್ನು ಗೆಲ್ಲಿಸಬಹುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಅವರು ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಮೇಶ ಜಾರಕಿಹೊಳಿ ಈ ಹಿಂದೆ ಕಾಂಗ್ರೆಸ್ ನಲ್ಲಿ ಇದ್ದುಕೊಂಡು ವಿವೇಕರಾವ್ ಪಾಟೀಲ ಗೆಲ್ಲಿಸಿದ್ದರು.
ಅದರಂತೆ ಈಗ ಬಿಜೆಪಿ ಅಭ್ಯರ್ಥಿ ಅಥವಾ ಲಖನ್ ಜಾರಕಿಹೊಳಿ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಗೆಲ್ಲಿಸಲು ಸಾಧ್ಯ ಇಬ್ಬರನ್ನೂ ಅಲ್ಲಾ ಎಂದರು.
ಡಿ.ಕೆ.ಶಿವಕುಮಾರ ಯಾವುರ ಸಾಹುಕಾರ್ ಎಂಬ ಹೇಳಿಕೆಗೆ ಪ್ರತಿಕ್ರಯಿಸಿದ ಅವರು,ಅದು ರಾಜಕೀಯವಾಗಿ ಹೇಳಿದ್ದು, ಅದನ್ನು ನಾವ್ಯಾಕೆ ಸಿರಿಯಸ್ ಆಗಿ ತೆಗೆದುಕೊಳ್ಳಬೇಕೆಂದ ಅವರು, ಜಾರಕಿಹೊಳಿಯಲ್ಲಿ ಐವರು ಇದ್ದೇವೆ ಎಂದರು.