Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮಹಾಂತ ಶ್ರೀಗಳ ಆಶೀರ್ವಾದ ‌ಪಡೆದ ಕೈ ಅಭ್ಯರ್ಥಿ

localview news

ಸವದತ್ತಿ:ಡಿಸೆಂಬರ್ 10ರಂದು ನಡೆಯಲಿರುವ ವಿಧಾನ ಪರಿಷತ್ತಿನ ಚುನಾವಣೆ ನಿಮಿತ್ತ ಸವದತ್ತಿ ತಾಲೂಕಿನ ವಿವಿಧೆಡೆ ಮತಯಾಚನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ, ಮುರಗೋಡ ಮಹಾಂತ ಅಜ್ಜನವರ ಕೃರ್ತು ಗದ್ದುಗೆ ದರ್ಶನ ಪಡೆದರು.

ಸವದತ್ತಿ ತಾಲೂಕಿನ ಧಾರ್ಮಿಕ ಕ್ಷೇತ್ರವಾದ ಮುರಗೋಡ ಗ್ರಾಮದ ಶ್ರೀ ಮಹಾಂತ ( ದುರದುಂಡೇಶ್ವರ) ಮಠಕ್ಕೆ ತೆರಳಿ ಪವಾಡ ಪುರುಷ, ನಡೆದಾಡುವ ದೇವರೆಂದೇ ಪ್ರಸಿದ್ದರಾಗಿದ್ದ ಶ್ರೀ ಮಹಾಂತ ಅಜ್ಜನವರ ಕೃರ್ತು ಗದ್ದುಗೆಗೆ ನಮನವನ್ನು ಸಲ್ಲಿಸಿದ ಅವರು, ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ನೀಲಕಂಠೇಶ್ವರ ಮಹಾಸ್ವಾಮಿಗಳ ಚರಣ ಪಾದ ಕಮಲಗಳಿಗೆ ನಮಸ್ಕರಿಸಿ, ಮಠದ ಅಭಿವೃದ್ಧಿಯ ಕುರಿತು ಚರ್ಚಿಸಿದರು.ನಂತರ, ಮುರಗೋಡ, ರುದ್ರಾಪುರ, ಮರಕುಂಬಿ, ಹಾರೂಗೊಪ್ಪ, ಚಚಡಿ, ಇಂಚಲ, ತಡಸಲೂರ, ಬುದ್ದನೂರ ಈ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರದೇಶಗಳಲ್ಲಿ ಗ್ರಾಮದ ಮುಖಂಡರ ಹಾಗೂ ಪಕ್ಷದ ಪದಾಧಿಕಾರಿಗಳ ಜೊತೆ ಸಂಚರಿಸಿ ಮತಯಾಚಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಸಹಕಾರ ನೀಡಬೇಕು. ಯಾರು ಚುನಾವಣೆ ಬಂದಾಗಷ್ಟೇ ಬರುವವರು, ಯಾರು ಸದಾ ಜನರೊಂದಿಗೆ, ಜನಪರ ಕೆಲಸಗಳಲ್ಲಿ ಸಕ್ರೀಯರಾಗಿರುತ್ತಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳುವಷ್ಟು ಜನರು ಬುದ್ದಿವಂತರಿದ್ದಾರೆ. ನನ್ನ ಮೇಲಿಡುವ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಾನು ಕೆಲಸ ಮಾಡುತ್ತೇನೆ ಎಂದು ಚನ್ನರಾಜ ಹಟ್ಟಿಹೊಳಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಯಾ ಗ್ರಾಮಗಳ ಜನಪ್ರತಿನಿಧಿಗಳು, ಪಕ್ಷದ ಮುಖಂಡರಾದ ಬಸವರಾಜ ಕೌಜಲಗಿ, ಶಂಕರಗೌಡ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ, ಮಹಾಂತೇಶ ಕಳ್ಳಿಬಡ್ಡಿ, ಮಹಾಂತೇಶ ಮತ್ತಿಕೊಪ್ಪ, ಪ್ರಶಾಂತ ಪಟ್ಟಣಶೆಟ್ಟಿ, ಸಂಗಪ್ಪ ಬೆಳಗಾವಿ, ಶಿವು ಮೆನಸಿ, ಈರಣ್ಣ ಮಟ್ಟಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.