Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕಾಂಗ್ರೆಸ್ ಗೆ ಲೇವಡಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ

localview news

ಬೆಳಗಾವಿ:ಕಾಂಗ್ರೆಸ್ ಮಿತ್ರರು ಸಾಕಷ್ಟು ತಿಣುಕಾಡುತ್ತಿದ್ದಾರೆ. ಫಲಿತಾಂಶದ ಬಳಿಕ ಅವರು ಜನರಿಗೆ ಮುಖ ತೋರಿಸಲು ಆಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ‌ನೇತೃತ್ವದಲ್ಲಿ 2014ರಲ್ಲಿ ಅಧಿಕಾರಕ್ಕೆ‌ ಬಂದು ಸಾಕಷ್ಟು ಅಭಿವೃದ್ಧಿ ಕೆಲಸ‌ ಮಾಡಿದ‌ ಪರಿಣಾಮ 2019ರಲ್ಲಿಯೂ ಕೇಂದ್ರದಲ್ಲಿ ಬಿಜೆಪಿ‌ ಸರಕಾರ‌ ಬಂದಿದೆ. ಮುಂದೆಯೂ ಬಿಜೆಪಿ ‌ಸರಕಾರವೇ ರಚನೆಯಾಗುತ್ತದೆ ಎಂದರು.

ಸ್ವಾತಂತ್ರ್ಯ ಬಂದು 71 ವರ್ಷಗಳಿಂದ ಕಾಂಗ್ರೆಸ್ ಜನರನ್ನು ಗುಲಾಮರಂತೆ ನಡೆಸಿಕೊಂಡಿತ್ತು. ಅಲ್ಪಸಂಖ್ಯಾತರು ಮತ್ತು ದೀನದಲಿತರು ಕಾಂಗ್ರೆಸ್ ಗೆ ಒತ್ತೆಯಾಗಿರುತ್ತಾರೆ ಎಂದುಕೊಂಡಿದ್ದರು. ಅದು ಈಗ ಬದಲಾಗಿದೆ. ಮೋದಿ ಸರಕಾರ ಬಂದ ಬಳಿಕ ಕಾಂಗ್ರೆಸ್ ಮುಕ್ತ ಭಾರತವಾಗುವ ಸಂಕಲ್ಪ ಮಾಡಿದರು ಎಂದರು.

ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಸರಕಾರ ಹಿಂದೆ ಬಿದಿಲ್ಲ. ಪ್ರವಾಹ ಬಂದು ಸಾಕಷ್ಟು ರಸ್ತೆ, ಸೇತುವೆ, ಬಡವರ ಮನೆ ಬಿದ್ದು ಹೋಗಿದ್ದವು. ಅದಕ್ಕೆ ಪರಿಹಾರ ಕೊಡುವ ಕೆಲಸ ನಿರಂತರವಾಗಿ ನಡೆದಿದೆ ಎಂದರು.

ಕವಟಗಿಮಠ ಒಬ್ಬ ಸಜ್ಜನ ರಾಜಕಾರಣಿ. ವಿಧಾನ ಪರಿಷತ್ ಸದಸ್ಯರಾಗಿ ‌ಉತ್ತಮ ಕೆಲಸ‌ ಮಾಡಿದ್ದಾರೆ. ಗ್ರಾಮಗಳನ್ನು‌ ಸುಧಾರಿಸುವ ಕೆಲಸ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಅವರ‌ ಗೆಲವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಬಿಜೆಪಿ‌ ಗ್ರಾಮೀಣ ಜಿಲ್ಲಾ‌ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿ ಪಾಟೀಲ, ಶಾಸಕ‌ ಅನಿಲ್ ಬೆನಕೆ, ಸಂಸದೆ ಮಂಗಳಾ ಅಂಗಡಿ, ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.