Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೊಮ್ಮಾಯಿ‌ ಆರೆಸ್ಸಸ್ಸ ಮನುಷ್ಯ ಅಲ್ಲ: ಸಿದ್ದು ವಾಗ್ದಾಳಿ

localview news

ಬೆಳಗಾವಿ: ರಾಜ್ಯದಲ್ಲಿ ಎಲ್ಲಿ ಎರೆಡೆರೆಡು ಸೀಟು ಗಳಿವೆ ಅಲ್ಲಿ ನಾವು ಒಬ್ಬರೇ ಅಬ್ಯರ್ಥಿಯನ್ನು ನಿಲ್ಲಿಸಿದ್ದೀವ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ರವಿವಾರ ರಾಮದುರ್ಗದಲ್ಲಿ ಮಾತನಾಡಿದರು,  ಆದರೆ ಬಿಜೆಪಿ ಅವರು ಒಬ್ಬರನ್ನು ನಿಲ್ಲಿಸಬೇಕಿತ್ತು ಆದ್ರೆ ಇಬ್ಬರನ್ನು ನಿಲ್ಲಿಸಿದ್ದಾರೆ.

ಬಿಜೆಪಿ ವಿರುದ್ಧ ಟಾಂಗ್ ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ. ರಮೇಶ ಜಾರಕಿಹೊಳಿ ಹಿಂದಿನ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ವಿರುದ್ಧ ಬೇರೆ ವ್ಯಕ್ತಿನ ನಿಲ್ಲಿಸಿ ಸೋಲಿಸಿದರು.ಈಗ ತಮ್ಮನನ್ನು ನಿಲ್ಲಿಸಿ ಅವರ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿಯೆ ಸೋಲಿಸ್ತಾರೆ.

ರಮೇಶ ಜಾರಕಿಹೊಳಿ ಹೇಳತಾರೆ, ವಿವೇಕರಾವ ಪಾಟೀಲ ಗೆ ಸಿದ್ದರಾಮಯ್ಯ ಟಿಕೇಟ್ ಕೊಟ್ಟಿಲ್ಲ ಅಂತ ಅಷ್ಟೊಂದು ಪ್ರೀತಿ ಇದ್ದಿದರೆ ಈ ಸಲ ವಿವೇಕರಾವ ಪಾಟೀಲ ನಿಲ್ಲಿಸಬೇಕಿತ್ತು. ಅದನ್ನು ಬಿಟ್ಟು ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದು ರಮೇಶಗೆ ತಿರುಗೇಟು ನೀಡಿದರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ ನಾನು ಸಿಎಂ ಆಗಿದ್ದಾಗ ಏಳು ಕೆಜಿ. ಅಕ್ಕಿ ಕೊಟ್ಟಿದ್ದೆ ಆದರೆ ಅದನ್ನು ಬಿಜೆಪಿ ಅವರು 5 ಕೆಜಿಗೆ ತಂದಿದ್ದಾರೆ.ನಮ್ಮ ಸರ್ಕಾರ ಜಾರಿಗೆ ತಂದ ಏಷ್ಟೋ ಯೋಜನೆಗಳನ್ನು ಬಂದ್ ಮಾಡಿದ್ದಾರೆ.

ಅದು ನಿಮ್ಮ ಹಣ ನಿಮಗೆ ಕೊಡೋದಕ್ಕೆ ಏನು. ಈ ದೇಶಕ್ಕೆ ಸ್ವಾತಂತ್ರ ತಂದಿದ್ದು ಕಾಂಗ್ರೆಸ್ ಪಕ್ಷ. ಪ್ರಧಾನಿ ನರೇಂದ್ರ ಮೋದಿ ಕೊಡುಗೆ ಏನು. ರೈತರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್. ಮನಮೋಹನ್ ಸಿಂಗ್ ಬದಲು ಸಾಲ ಮನ್ನಾ ಮಾಡಿದ್ದು ಮೋದಿ ಎಂದ ಸಿದ್ದರಾಮಯ್ಯ. ಬಳಿಕ Sorry ಎಂದು ಕೇಳಿದ ಸಿದ್ದರಾಮಯ್ಯ .

ದುಡ್ಡು ಹಂಚಿ, ಆಪರೇಷನ್ ಕಮಲ ಮಾಡಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯನ್ನು ದಯಮಾಡಿ ಕಿತ್ತು ಎಸಿರಿ ಮಾರಾಯ. ಮಹಾತ್ಮ ಗಾಂಧಿಯನ್ನು ಕೊಂದವರು ಆರ್ ಎಸ್ ಎಸ್ ನವರು. ಗೊಡ್ಸೆ ವಂಶಸ್ಥರು ಆರ್ ಎಸ್ ಎಸ್ ಹಾಗೂ ಬಿಜೆಪಿ. ಸಿಎಂ ಬೊಮ್ಮಾಯಿ ಎನ್ ಆರ್ ಎಸ್ ಎಸ್ ಅಲ್ಲ. ಲಾಟರಿ ಹೊಡೆದು ಬೊಮ್ಮಾಯಿ ಸಿಎಂ ಆಗಿದ್ದಾರೆ ಬೊಮ್ಮಾಯಿ ಕಿತ್ತು ಹಾಕಲು ಈಶ್ವರಪ್ಪ ಓಡಾಡುತ್ತಿದ್ದಾರೆ ಎಂದರು.