Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಯಡಿಯೂರಪ್ಪನವರ ನೋವು ಬಿಜೆಪಿ ಮೇಲೆ ಹೇಳಲು ಆಗಲ್ಲ: ಡಿಕೆಶಿವಕುಮಾರ

localview news

ಬೆಳಗಾವಿ :ಪಾಪ ಯಡಿಯೂರಪ್ಪ ಅವರಿಗೆ ಆದ ನೋವನ್ನ ಬಿಜೆಪಿ ಅವರ ಮೇಲೆ ಹೇಳಲು ಆಗಲ್ಲ‌‌. ವರ ದುಃಖ, ದುಮ್ಮಾನ, ರೇಡ್ ಮಾನಸಿಕ ಹಿಂಸೆ ರಾಜೀನಾಮೆ ಹೊರ ಹಾಕಬೇಕು ಎಂದು ಡಿಕೆಶಿವಕುಮಾರ ವೆಂಗ್ಯವಾಡಿದರು.

ಅವರು ಸೋಮವಾರ ಬೆಳಗಾವಿಯಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದರು‌. ಯಡಿಯೂರಪ್ಪನವರು ಒಂದ ಇಬ್ಬರಿಂದ ಕಾಂಗ್ರೆಸ್ ರಾಜ್ಯದಲ್ಲಿ ಜೀವಂತ ಇದೆ ಎಂದು ಹೇಳುತ್ತಾರೆ. ನಾವು ಫ್ರೀಯಾಗಿದೀವಿ ನಮ್ಮ ಮೇಲೆ ಹಾಕ್ತಿದ್ದಾರೆ ಹಾಕಲಿ.. ನಮ್ಮನ್ನ ಪರ್ಮನೆಂಟ್ ಆಗಿ ವಿರೋಧ ಪಕ್ಷದಲ್ಲಿ ಕುಡಿಸಲಿ.ಸರ್ಕಾರದ ಸ್ಥಿರತೆಯನ್ನ ನಾವು ಹಾಳು ಮಾಡ್ತಿಲ್ಲ ಅವರ ಪಕ್ಷದವರೇ ಹಾಳು ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದವರಿಗೆ ಈ ರಾಜ್ಯವನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಆಗುತ್ತಿಲ್ಲ.‌

ಲಂಚ ಕೊಡ್ತಿರುವ ಗುತ್ತಿಗೆದಾರರೇ ನಲವತ್ತು ಪರ್ಷಂಟ್ ಅಂತಾ ಹೇಳಿದ್ದಾರೆ. ನಮಗೆ ಹತ್ತು ಪರ್ಷಂಟ್ ಅಂತಾ ಹೇಳಿದ್ದರು.ಯಾವುದಾದರೂ ನಮ್ಮ ಮೇಲೆ ಕೇಸ್ ಇತ್ತಾ? ಶಿವಕುಮಾರ್ ಎಷ್ಟು, ಸಿದ್ದರಾಮಯ್ಯ ಎಷ್ಟು ಇಸ್ಕೊಂಡಿದ್ದಾರೆ ಅಂತಾ ಪ್ರಧಾನಿ ತನಿಖೆ ಮಾಡಿಸಬೇಕಿತ್ತು.

ಈಗ ಶಾಸಕರಿಗಿಷ್ಟು, ಮಂತ್ರಿಗಳಿಗೆ ಇಷ್ಟು ಅಂತಾ ದೊಡ್ಡ ಲಿಸ್ಟ್ ಕೊಟ್ಟಿದ್ದಾರೆ ತನಿಖೆ ಮಾಡಿಸಲಿ.ಬೇರೆ ಯಾರು ಕೊಟ್ಟಿಲ್ಲ ಒಂದು ಲಕ್ಷ ಗುತ್ತಿಗೆದಾರರಿರುವ ಸಂಘಟನೆ ಅವರು ನೀಡಿದ್ದಾರೆ. ಇಡಿ ದೇಶದಲ್ಲೇ ಅತ್ಯಂತ ಭ್ರಷ್ಟಾಚಾರ ಸರ್ಕಾರ ಈ ರಾಜ್ಯದಲ್ಲಿದೆ ಎಂದ ಡಿಕೆಶಿ ಡಿ. 13ರಂದು ಬೆಳಗಾವಿಯಲ್ಲಿ ಅಧಿವೇಶನಕ್ಕೆ ಕೆಲವರ ವಿರೋಧ ವಿಚಾರ.

ಅಧಿವೇಶನ ಬೆಳಗಾವಿಯಲ್ಲಿ ಮಾಡುವಂತೆ ನಾನೇ ಒತ್ತಡ ಹಾಕಿದ್ದೆ.ಈಗ ಒತ್ತಡದಲ್ಲಿ ಅಧಿವೇಶನ ಮಾಡುತ್ತಿದ್ದಾರೆ. ಅದನ್ನು ಎನಾದ್ರೂ ಮಾಡಿ ಮುಂದೆ ಹಾಕುವ ಪ್ರಯತ್ನ ಮಾಡ್ತಿದ್ದಾರೆ. ಅಧಿವೇಶನ ಮುಂದುಡದಂತೆ ಸ್ಪೀಕರ್ ಅವರಿಗೆ ಹೇಳಿದೀನಿ. ನಾವು ಸಾಮೂಹಿಕವಾಗಿ ದೊಡ್ಡ ಪ್ರತಿಭಟನೆ ಮಾಡುತ್ತೇವೆ. ಬೆಂಗಳೂರಿನಲ್ಲಿ ಅಸೆಂಬ್ಲಿಗೆ ಬರ್ತೇವಿ ಇಲ್ವೋ ಅಂತಾ ಸ್ಪೀಕರ್ ಅವರಿಗೆ ಹೇಳಿದೀನಿ. ನೆರೆ ಸಂತ್ರಸ್ತರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಅಂತಾ ಅರ್ಜಿ ಕೊಟ್ಟಿದ್ದಾರೆ.

ಸರ್ಕಾರ ಅವರಿಗೆ ಮನೆಗಳನ್ನ ಎಲ್ಲಿ ಕಟ್ಟಿಕೊಟ್ಟಿದೆ.ಬಅಧಿವೇಶನದಲ್ಲಿ ಜನರ ಧ್ವನಿ ಎತ್ತಲಿಲ್ಲ ಅಂದ್ರೇ ನಮ್ಮ ಕರ್ತವ್ಯಕ್ಕೆ ನಾವು ಮೋಸ ಮಾಡಿದ ಹಾಗೆ ಉತ್ತರ ಕರ್ನಾಟಕದ ಶಾಸಕರೆಲ್ಲರೂ ಸೇರಿ ಚರ್ಚೆ. ನೆರೆ ಪರಿಹಾರ ನೀಡುವಲ್ಲಿ ಸರ್ಕಾರದ ವೈಫಲ್ಯದ ಬಗ್ಗೆ ದೊಡ್ಡ ವಿಚಾರವನ್ನ ಪ್ರಸ್ತಾವನೆ ಮಾಡುತ್ತೇವೆ.ಶಾಸಕಾಂಗ ಸಭೆಯಲ್ಲಿ ಮಹದಾಯಿ ವಿಚಾರದ ಬಗ್ಗೆ ಚರ್ಚೆ ಮಾಡುತ್ತೇವೆ.ಮಹದಾಯಿ ಜಡ್ಜ್ ಮೆಂಟ್ ಬಂದ ಮೇಲೆಯೂ ಕೆಲಸ ಮಾಡೋಕೆ ಆಗಿಲ್ಲ.