ನಾವೇನು ಜೆಡಿಎಸ್ ಬೆಂಬಲ್ ಕೇಳಿಲ್ಲ:ಬೊಮ್ಮಾಯಿ
ಬೆಳಗಾವಿ :ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲ ಎಂಬ ಹೆಚ್ಡಿಕೆ ಹೇಳಿಕೆ ವಿಚಾರ ಅದು ಅವರ ಪಕ್ಷದ ವಿಚಾರ, ಅದರ ಬಗ್ಗೆ ಕಮೆಂಟ್ ಮಾಡಲ್ಲ ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ನಮ್ಮ ಹಿರಿಯ ನಾಯಕ ಬಿಎಸ್ವೈ ತಮ್ಮ ವಿಚಾರ ವ್ಯಕ್ತಪಡಿಸಿದ್ರು ಮತ್ತು ಎಲ್ಲಿ ಸ್ಪರ್ಧಿಸಲ್ಲ ಅಲ್ಲಿ ಬೆಂಬಲ ಕೊಟ್ರೆ ಒಳ್ಳೆಯದು ಅಂತಾ ಏಚಡಿಕೆಯವರಿಗೆ ಕೇಳಿದ್ರು, ನಾವೇನೂ ಅವರ ಬೆಂಬಲವನ್ನು ಕೇಳಿರಲಿಲ್ಲ ಎಂದರು.
ಅವರು ಏನ್ ತೀರ್ಮಾನ ತಗೆದುಕೊಳ್ತಾರೆ ತಗೆದುಕೊಳ್ಳಲಿ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.