ಪೊಲೀಸ್ ಹಾಗು ಕಂಡಕ್ಟರ್ ನಡುವೆ ಹೊಡೆದಾಟ
ಬೆಳಗಾವಿ :ಚನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಪೇದೆ, ಸರ್ಕಾರಿ ಬಸ್ ನಿರ್ವಾಹಕನ ಮಧ್ಯೆ ಗಲಾಟೆ ನಡೆದು ಕೈ ಕೈ ಮಿಲಾಯಿಸಿದ ಘಟನೆ ಬುಧವಾರ ನಡೆದಿದೆ. ಬಸ್ ನಿಲ್ಲಿಸುವ ವಿಚಾರಕ್ಕೆ ಪರಸ್ಪರ ಬಡಿದಾಡಿಕೊಂಡ ಮುಖ್ಯ ಪೇದೆ, ನಿರ್ವಾಹಕ ಬಿ.ಕೆ.ಕಂಗ್ರಾಳಿಯಿಂದ ಸಿಬಿಟಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ನಗರ ಸಾರಿಗೆ ಬಸ್ ಚನ್ನಮ್ಮ ವೃತ್ತದಲ್ಲಿ ಸಿಗ್ನಲ್ ಮಧ್ಯೆ ನಗರ ಸಾರಿಗೆ ಬಸ್ ನಿಲ್ಲಿಸಿದ್ದ ಚಾಲಕ.
ಸಿಗ್ನಲ್ ಮಧ್ಯೆ ಬಸ್ ನಿಲ್ಲಿಸಿ ಪ್ರಯಾಣಿಕರ ಇಳಿಸುತ್ತಿದ್ದ ಚಾಲಕ, ನಿರ್ವಾಹಕ. ಸಿಗ್ನಲ್ನಲ್ಲಿ ಬಸ್ ನಿಲ್ಲಿಸಿದ್ದನ್ನು ಪ್ರಶ್ನಿಸಿದ ಟ್ರಾಫಿಕ್ ಮುಖ್ಯಪೇದೆ. ಟ್ರಾಫಿಕ್ ಮುಖ್ಯಪೇದೆಗೆ ಅವಾಚ್ಯ ಶಬ್ದಗಳಿಂದ ನಿರ್ವಾಹಕ ನಿಂದನೆ.
ಈ ವೇಳೆ ಆಕ್ರೋಶಗೊಂಡು ನಿರ್ವಾಹಕನಿಗೆ ಮುಖ್ಯಪೇದೆಯಿಂದ ಕಪಾಳಮೋಕ್ಷ ಬಳಿಕ ಮುಖ್ಯಪೇದೆ ಕಪಾಳಕ್ಕೆ ಬಾರಿಸಿದ ಬಸ್ ನಿರ್ವಾಹಕ ಪರಸ್ಪರ ಬೈದಾಡಿ, ಬಡಿದಾಡಿಕೊಂಡ ಮುಖ್ಯಪೇದೆ, ನಿರ್ವಾಹಕರ ಜಗಳ ನೋಡಿಕೊಂಡು ಮನರಂಜನೆ ಅನುಭವಿಸಿದ ಸಾರ್ವಜನಿಕರು.